ಬನ್ನೂರು: ಟಿ.ನರಸೀಪುರ ತಾಲೂಕು ಬನ್ನೂರನ್ನು ತಾಲೂಕು ಕೇಂದ್ರ ಮಾಡಬೇಕು ಎಂಬ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಬನ್ನೂರಿನಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬನ್ನೂರು ಪಟ್ಟಣದ ಮುಖ್ಯ ರಸ್ತೆ ಚತುಷ್ಪಥವಾಗುತ್ತದೆ. ಆಗ ಬನ್ನೂರಿಗೆ ಕೋಡು ಬರುತ್ತದೆ ಎಂದು ಹೇಳಿದಾಗಲೂ ಸಭಿಕರು ಮೌನವಾಗಿದ್ದರು. ರಸ್ತೆ ಅಗಲವಾಗಿ, ಸುಂದರ ರಸ್ತೆ ನಿರ್ಮಾಣವಾಗುತ್ತದೆ ಎಂದರೂ ಸುಮ್ಮನೆ ಕುಳಿತಿದ್ದೀರಲ್ಲ ಚಪ್ಪಾಳೆ ತಟ್ರಯ್ಯ ಎಂದೇಳಿ ನಗಿಸಿದರು.
ರಸ್ತೆಗೆ ಮನೆಗಳನ್ನು ಕಳೆದುಕೊಂಡವರಿಗೆ 13 ಕೋಟಿ ಕೊಡಲಾಗುತ್ತದೆ. ರಸ್ತೆ ಸಂಪರ್ಕ ಉತ್ತಮವಾದಲ್ಲಿ ಪಟ್ಟಣ ಅಭಿವೃದ್ಧಿ ಹೊಂದುತ್ತದೆ ಎಂದರು.
Advertisement