ಕ.ಪ್ರ. ವಾರ್ತೆ, ಮೈಸೂರು, ಆ.6
ಹಿರಿಯ ರಾಜಕೀಯ ಮುತ್ಸದ್ದಿ, ಅಂಬೇಡ್ಕರ್ ವಾದಿಯಾದ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರ 66ನೇ ಹುಟ್ಟುಹಬ್ಬವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಬುಧವಾರ ಆಚರಿಸಿದರು.
ಸಚಿವರ ನೂರಾರು ಬೆಂಬಲಿಗರು ಹಾಗೂ ಹಿತೈಷಿಗಳು ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ಮತ್ತು ಅಶೋಕಪುರಂನ ಸರ್ಕಾರಿ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಇಲ್ಲಿನ ಮಕ್ಕಳಿಗೆ ಬಟ್ಟೆ, ಪುಸ್ತಕ, ಹಣ್ಣು ಹಂಪಲು ವಿತರಿಸಿದರಲ್ಲದೆ, ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಾಯಕರ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು. ಅಶೋಕಪುರಂನಲ್ಲಿರುವ ನಡೆದ ಕಾರ್ಯಕ್ರಮದಲ್ಲಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಹಾಗೂ ಸಂಗೀತ ವಿವಿ ಕುಲಪತಿ ಡಾ.ಸರ್ವಮಂಗಳ ಶಂಕರ್ ಪುಷ್ಪಗುಚ್ಚ ನೀಡಿ ಶುಭಾಶಯ ಕೋರಿದರು. ಮಾಜಿ ಸಂಸದ ಎ.ಸಿದ್ದರಾಜು, ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ಮೂರ್ತಿ, ಡಿ. ಧ್ರುವಕುಮಾರ್, ಮಾಜಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ವೀರೇಶ್, ಸದಸ್ಯ ಅಕ್ಬರ್ ಅಲಿ, ಇದ್ದರು.
Advertisement