ಗುಂಡ್ಲುಪೇಟೆ: ತಾಲೂಕಿನ ನಿಟ್ರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ರಂಗಮಂದಿರ ನಿರ್ಮಿಸಿ ಕೊಡುವುದಾಗಿ ಜಿಪಂ ಅಧ್ಯಕ್ಷ ಡಿ.ಸಿ.ನಾಗೇಂದ್ರ ಅವರು ಭರವಸೆ ನೀಡಿದರು. ತಾಲೂಕಿನ ನಿಟ್ರೆ ಗ್ರಾಮದ ಪ್ರೌಢಶಾಲೆಯ ಅಕ್ಷರ ದಾಸೋಸದ ಅಡುಗೆ ಮನೆಯ ಕಟ್ಟಡ ಉದ್ಘಾಟಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಹಾಗು ಶಾಲೆಯ ಮೂಲಭೂತ ಸಮಸ್ಯೆಗಳಿದ್ದರೆ ತಕ್ಷಣದಲ್ಲೇ ಬಗೆಹರಿಸಿ ಕೊಡುವುದಾಗಿ ತಿಳಿಸಿದರು.ತಾಪಂ ಅಧ್ಯಕ್ಷ ಕನ್ನೇಗಾಲಸ್ವಾಮಿ ಮಾತನಾಡಿ, ಶಾಲೆ ಬಿಟ್ಟಿರುವ ಮಕ್ಕಳನ್ನು ಶಾಲೆಗೆ ಸೇರಿಸಲು ಪೋಷಕರು ಮುಂದಾಗಬೇಕು ಎಂದರು.ಕಾಂಗ್ರೆಸ್ ಮುಖಂಡ ಎಚ್.ಎಸ್.ನಂಜುಂಡಪ್ರಸಾದ್, ತಾಪಂ ಉಪಾಧ್ಯಕ್ಷ ಬಂಗಾರ ನಾಯಕ, ಜಿಪಂ ಮಾಜಿ ಸದಸ್ಯ ಡಿ.ನಾಗರಾಜು ಮಾತನಾಡಿದರು.ಗ್ರಾಪಂ ಅಧ್ಯಕ್ಷ ಕೃಷ್ಣಶೆಟ್ಟಿ, ಡಾ.ಚಂದ್ರೇಗೌಡ, ಗ್ರಾಪಂ ಉಪಾಧ್ಯಕ್ಷೆ ಸವಿತಾ, ಸ್ವಾಮಿ, ಗ್ರಾಮದ ಮುಖಂಡ ನಾಗರಾಜಪ್ಪ, ಗ್ರಾಪಂ ಸದಸ್ಯ ಮಾದೇಗೌಡ, ಮಹದೇವಪ್ಪ, ಶಾಲಾ ಶಿಕ್ಷಕರು. ಗ್ರಾಮಸ್ಥರು ಇದ್ದರು.
Advertisement