ಗುಂಡ್ಲುಪೇಟೆ: ತಾಲೂಕಿನಲ್ಲಿರುವ ಖಾಸಗಿ ಹಾಗೂ ಗ್ರಾಪಂ ವ್ಯಾಪ್ತಿಯ ಎಲ್ಲ ಕೊಳೆವೆ ಬಾವಿಗಳನ್ನು ಮುಚ್ಚಲು ಗ್ರಾಪಂ ಪಿಡಿಒಗಳು ಮುಂದಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ.ಕಮ್ಮಾರ್ ಆದೇಶಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಒ ಹಾಗು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ತಿಂಗಳ ಅಂತ್ಯದವರೆಗೆ ಎಲ್ಲಾ ಕೊಳೆವೆಬಾವಿಗಳನ್ನು ಮುಚ್ಚಿಸಲು ಕ್ರಮ ತೆಗದುಕೊಳ್ಳಿ ಎಂದು ಸೂಚನೆ ನೀಡಿದರು.
Advertisement