ಚಾಮರಾಜನಗರ: ಜಿಲ್ಲಾ ಪರಿಶಿಷ್ಟ ಪಂಗಡದ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ಒತ್ತಾಯಿಸಿ ಸಂಘದ ಅಧ್ಯಕ್ಷ ಮಹದೇವನಾಯಕ ಹಾಗೂ ಮತ್ತಿತರರು ಉಸ್ತುವಾರಿ ಸಚಿವ ಮಹದೇವಪ್ರಸಾದ್ ಹಾಗೂ ಸಂಸದ ಧ್ರುವನಾರಾಯಣ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಸಚಿವ ಮಹದೇವಪ್ರಸಾದ್ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಸಲ್ಲಿಸಿ ಮಾತನಾಡಿದ ಸಂಘದ ಅಧ್ಯಕ್ಷ ಮಹದೇವನಾಯಕ, ಆರ್ಥಿಕವಾಗಿ ಹಿಂದುಳಿದಿದಿರುವ ಎಲ್ಲಾ ಜನಾಂಗದವರ ಆರ್ಥಿಕ ಮಟ್ಟ ಸುಧಾರಿಸುವ ಸಲುವಾಗಿ ಸಂಘಕ್ಕೆ ಈಗಾಗಲೇ ಸುಮಾರು ರು.25ಲಕ್ಷ ಸಾಲ ನೀಡಲಾಗಿದೆ. ಇನ್ನೂ ಹೆಚ್ಚಿನ ಅನುದಾನ ನೀಡುವ ಜೊತೆಗೆ ಸಂಘವು ಉನ್ನತ ಮಟ್ಟಕ್ಕೆ ಬೆಳೆಯಲು ಸಹಕರಿಸಬೇಕೆಂದು ಮನವಿ ಮಾಡಿದರು.ಅನುದಾನ ಬಿಡುಗಡೆ ಮಾಡಿಸಿಕೊಡುವ ಭರವಸೆ ನೀಡಿ ಸಚಿವರಾದ ಎಚ್.ಎಸ್. ಮಹದೇವಪ್ರಸಾದ್ ನೀಡಿದರು.ಸಂಘದ ಉಪಾಧ್ಯಕ್ಷ ವೆಂಕಟರಮಣ ನಾಯಕ, ನಿರ್ದೇಶಕರಾದ ಆನಂದ್, ಎನ್.ರವಿಕುಮಾರ್, ಸ್ವಾಮಿ ನಾಯಕ್, ಸಿ.ವಿ.ಮಹೇಶ್, ಬಂಗಾರಸ್ವಾಮಿ, ರಾಜು, ವೆಂಕಟಲಕ್ಷ್ಮಿ, ಕಾರ್ಯದರ್ಶಿ ಎನ್.ರಾಘವೇಂದ್ರ ಇದ್ದರು.ಕೊಳವೆ ಬಾವಿ ಮುಚ್ಚಲು ಆಗ್ರಹ
ಹನೂರು: ಹನೂರು ವ್ಯಾಪ್ತಿಯ ಬೂದುಬಾಳು ಗ್ರಾಮದ ಶಾಲೆ ಎದುರು ಇರುವ ಕೊಳವೆ ಬಾವಿಗಳನ್ನು ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬೂದುಬಾಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7 ನೇ ತರಗತಿಯವರೆಗೆ 75 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಹ್ಯಾಂಡ್ ಪಂಪ್ವೊಂದನ್ನು ದುರಸ್ತಿಗಾಗಿ ಬಿಚ್ಚಿಕೊಂಡು ಹೋಗಿದ್ದು, ಮೇಲ್ಭಾಗದ ಮುಚ್ಚಳ ಹಾಕದೆ ಹಾಗೇ ಬಿಟ್ಟಿದ್ದಾರೆ.ಶಾಲೆಯ ಎದುರು ಕೆರೆ ಸಮೀಪದಲ್ಲಿ ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರೆಸಲಾಗಿತ್ತು. ಅಲ್ಲಿಯೂ ಬೋರ್ವೆಲ್ ಮುಚ್ಚದೇ ಹಾಗೆಯೇ ಬಿಟ್ಟಿದ್ದಾರೆ.ಈ ನಿಟ್ಟಿನಲ್ಲಿ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Advertisement