ಮೈಸೂರು: ಸಿಂಡಿಕೇಟ್ ಬ್ಯಾಂಕ್ 2014-15ನೇ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕ ಅವಧಿಯಲ್ಲಿ 1014 ಕೋಟಿ ವಹಿವಾಟು ನಡೆಸಿದ್ದು, ಕಳೆದ ಬಾರಿ 949 ಕೋಟಿ ವಹಿವಾಟು ನಡೆಸಿತ್ತು.ಈ ಮೂರು ತಿಂಗಳಲ್ಲಿ 485 ಕೋಟಿ ನಿವ್ವಳ ಲಾಭ ಗಳಿಸಿದೆ. ಜಾಗತಿಕ ವ್ಯವಹಾರದಲ್ಲಿ ತನ್ನ ವಹಿವಾಟನ್ನು 331896 ಕೋಟಿಗೆ ವಿಸ್ತರಿಸಿಕೊಂಡಿದ್ದು, 182513 ಠೇವಣಿ ಸಂಗ್ರಹಿಸಿದೆ. ಬ್ಯಾಂಕ್ ಪ್ರಾದೇಶಿಕ ಮಟ್ಟದಲ್ಲಿ ಹೊಸದಾಗಿ 22 ಶಾಖೆಗಳನ್ನ ಆರಂಭಿಸಿದೆ ಎಂದು ಪ್ರಾದೇಶಿಕ ವ್ಯವಸ್ಥಾಪಕ ಕೆ.ನರೇಂದ್ರನಾಥ್ ಕಾಮತ್ ತಿಳಿಸಿದ್ದಾರೆ.
ಕಬಿನಿ ಜಲಾಶಯದ ಬಗ್ಗೆ ಮಲತಾಯಿ ಧೋರಣೆ
ಮೈಸೂರು: ಜಲಾಶಯ ತುಂಬಿದ ಕೂಡಲೇ ಮೊದಲು ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸುವ ಸರ್ಕಾರ ಬಾಗಿನ ಸಮರ್ಪಿಸಲು ಕಾವೇರಿಯನ್ನೇ ಆಯ್ಕೆ ಮಾಡಿಕೊಂಡು ಕಬಿನಿ ಜಲಾಶಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕಬಿನಿ ರೈತ ಹಿತರಣಕ್ಷಣಾ ಸಮಿತಿಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಖಂಡಿಸಿದ್ದಾರೆ. ರೈತರು ಕಬಿನಿಗೆ ಪೂಜೆ ಸಲ್ಲಿಸಲು ಹೋದಾಗ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಪೊಲೀಸರಿಂದ ಬಂಧಿಸಿದರು. ಆದರೆ, ಯಾರಿಗೂ ಮಾಹಿತಿ ನೀಡದೆ ಜಿಲ್ಲಾಮಂತ್ರಿಗಳ ಮೂಲಕ ಸರ್ಕಾರ ಬಾಗಿನ ಅರ್ಪಿಸಿತು. ಕಬಿನಿ ರೈತರನ್ನು ಅವಮಾನಿಸಲಾಗುತ್ತಿದೆ ಎಂದು ಹೇಳಿದರು.
ರಾಜಮನೆತನಕ್ಕೆ ನ್ಯಾಯ ಒದಗಿಸಿ
ಮೈಸೂರು: ಸ್ವಾತಂತ್ರ್ಯ ಪೂರ್ವದಲ್ಲಿ ದಲಿತರು, ಹಿಂದುಳಿದವರಿಗೆ ಸಾಮಾಜಿಕ ನ್ಯಾಯ ನೀಡಿದ ಮೈಸೂರು ರಾಜ ಮನೆತನದವರು ಕಣ್ಣೀರು ಸುರಿಸುವಂತೆ ಮಾಡುತ್ತಿರುವುದು ಸರಿಯೇ ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಕೆ.ಎನ್. ಪರೀಕ್ಷಿತ್ರಾಜ ಅರಸ್ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ. ಮೈಸೂರು ಮಹಾರಾಜರನ್ನು ಅಂದಿನ ನಿಮ್ಮ ಜನತಾದಳದ ಸರ್ಕಾರ ಕಾನೂನನ್ನು ಮಾಡಿ ಮಹಾರಾಜರನ್ನು ಬೀದಿಗೆ ಹಾಕಿದ್ದಾಯಿತು. ಈಗಲಾದರೂ ಕಾನೂನಿನ ಚೌಕಟ್ಟಿನಲ್ಲಿ ನ್ಯಾಯಾಲಯದ ವ್ಯಾಜ್ಯ ಪರಿಹರಿಸಿಕೊಡಬೇಕು. ಈ ಮೂಲಕ ಹಿಂದುಳಿದ ವರ್ಗಗಳ ನಾಯಕ ಎಂದು ಕರೆಸಿಕೊಳ್ಳುವ ತಾವು ರಾಜವಂಶಸ್ಥರ ಕಣ್ಣೀರು ಹಾಕಿಸುತ್ತಿರುವುದು ಸರಿಯೇ ಅವರು ಪ್ರಶ್ನಿಸಿದ್ದಾರೆ.
Advertisement