ಬನ್ನೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಬನ್ನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭಾ ವತಿಯಿಂದ ಪೌರ ಸನ್ಮಾನ ಮಾಡಿ, ಬೆಳ್ಳಿ ಕಿರೀಟ ತೊಡಿಸಲಾಯಿತು. ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳ್ಳಿ ಖಡ್ಗ ನೀಡಿ ಅಭಿನಂದಿಸಲಾಯಿತು.
ಬನ್ನೂರು ಪುರಸಭೆಗೆ 2045 ರವರೆಗೆ 22.25 ಕೋಟಿ ವೆಚ್ಚದಲ್ಲಿ 24್ಢ7 ಕುಡಿಯುವ ನೀರಿನ ವ್ಯವಸ್ಥೆಗೆ ಮಂಜೂರಾತಿ, ಹೋಬಳಿ ಮಟ್ಟದಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ 50 ಲಕ್ಷ ವೆಚ್ಚದಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಾಣ ಮಾಡಿಕೊಟ್ಟಿದ್ದಕ್ಕಾಗಿ ಪುರಸಭೆ ವತಿಯಿಂದ ಪೌರ ಸನ್ಮಾನ ಮಾಡಲಾಯಿತು.
ಮೈಸೂರು- ಮಳವಳ್ಳಿ ರಸ್ತೆಯ ಅಭಿವೃದ್ಧಿ ಬಹುವರ್ಷಗಳ ಬೇಡಿಕೆಯಾಗಿತ್ತು. ಎಫ್ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿ ಇದಕ್ಕಾಗಿ ಒತ್ತಡ ಹೇರುತ್ತಲೇ ಇತ್ತು. ಇದಕ್ಕೆ ಸ್ವಂದಿಸಿ, ಮಜೂರಾತಿ ದೊರಕಿಸಿಕೊಟ್ಟಿದ್ದಕ್ಕಾಗಿ ಲೋಕೋಪಯೋಗಿ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
- ಕೊರಟಗೆರೆ- ಬಾವಲಿ ರಾಜ್ಯ ಹೆದ್ದಾರಿ- 33ರ ಕಿ.ಮೀ. 154.77 ರಿಂದ 166 ರವರೆಗಿನ ರಸ್ತೆ ಅಭಿವೃದ್ಧಿ, ಬನ್ನೂರು ಪಟ್ಟಣ ವ್ಯಾಪ್ತಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೇಂದ್ರ ರಸ್ತೆ ನಿಧಿ ಹಾಗೂ ರಾಜ್ಯ ಅನುದಾನದಡಿ 59.50 ಕೋಟಿಗಳಲ್ಲಿ ಕೈಗೊಳ್ಳಲಾಗಿದೆ.
- ಲೋಕೋಪಯೋಗಿ ಇಲಾಖೆಯಿಂದ ಕೊರಟಗೆರೆ- ಬಾವಲಿ ರಾಜ್ಯ ಹೆದ್ದಾರಿ- 33ರ ಸರಪಳಿ 163-67 ರಿಂದ 180-97 ಕಿ.ಮೀ.ವರಗೆ 22.50 ಕೋಟಿ ಕಾಮಗಾರಿ.
Advertisement