ಮೈಸೂರು: ಬೆಂಗಳೂರು ರಸ್ತೆಯ ನಾಗನಹಳ್ಳಿ ಬಳಿ ಇರುವ ಮಹಾರಾಜ ತಾಂತ್ರಿಕ ಸಂಸ್ಥೆಯಲ್ಲಿ ಮಂಗಳವಾರ ಉದ್ಯೋಗ ಮೇಳ ಏರ್ಪಡಿಸಲಾಗಿತ್ತು.
ಉದ್ಯೋಗ ಮೇಳವನ್ನು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಉದ್ಘಾಟಿಸಿ ಅಭ್ಯರ್ಥಿಗಳಿಗೆ ಶುಭ ಹಾರೈಸಿದರು. ಎಂಇಟಿ ಅಧ್ಯಕ್ಷ ಡಾ.ಎಸ್. ಮುರಳಿ, ಸಿಇಒ ಡಾ.ಬಿ.ಜಿ. ನರೇಶ್ಕುಮಾರ್, ಕಾರ್ಯದರ್ಶಿ ಡಾ.ವೈ.ಟಿ. ಕೃಷ್ಣೇಗೌಡ, ಉಪಪ್ರಾಂಶುಪಾಲ ಡಾ.ಜಿ. ಹೇಮಂತಕುಮಾರ್, ಜಂಟಿ ಕಾರ್ಯದರ್ಶಿ ಡಾ.ಟಿ. ವಾಸುದೇವ, ಖಜಾಂಚಿ ಡಾ.ಡಿ.ಎಸ್. ಗುರು ಇದ್ದರು. ಈ ಮೇಳದಲ್ಲಿ ಐಟಿ ದಿಗ್ಗಜ ಇನ್ಫೋಸಿಸ್, ಟಿಸಿಎಸ್, ಐಬಿಎಂ ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಂಸ್ಥೆಗಳು ಪಾಲ್ಗೊಂಡಿದ್ದವು. ಪಿಯುಸಿ, ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಸೇರಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಪದವೀಧರರು ಭಾಗವಹಿಸಿದ್ದರು.