ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದದಿಂದ ಜು.13ರ ಸಂಜೆ 5ಕ್ಕೆ ವಿಜಯನಗರ 2ನೇ ಹಂತದ ಕೇರಳ ಸಮಾಜದಲ್ಲಿ ಜನಪ್ರತಿನಿಧಿಗಳ ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ,ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾಗವಹಿಸುವರು.
ಸಿದ್ದಪ್ಪಾಜಿ ಸ್ವಾಮಿಯವರ ದಾಳದ ಉತ್ಸವ
ಮೈಸೂರು: ಅಶೋಕಪುರಂ ಶ್ರೀ ಸಿದ್ದಪ್ಪಾಜಿ ನೀಲಾಗಾರ ಸಂಘ ಹಾಗೂ ಅನ್ನಸಂತರ್ಪಣಾ ಸಮಿತಿಯ ಸಂಯುಕ್ತಾಶ್ರಯದಲ್ಲಿ ಜು.13ರ ರಾತ್ರಿ 12ಕ್ಕೆ ಸಿದ್ದಪ್ಪಾಜಿ ಸ್ವಾಮಿಯವರ ದಾಳದ ಉತ್ಸವ ಏರ್ಪಡಿಸಿದೆ. ಜು.14ರ ಬೆಳಗ್ಗೆ 6ಕ್ಕೆ ಕೊಂಡೋತ್ಸವ, ಬೆಳಗ್ಗೆ 11.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಿದೆ.