ಮೈಸೂರು: ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದಿಂದ ಜು.13ರ ಬೆಳಗ್ಗೆ 10.30ಕ್ಕೆ ದಿವಾನ್ ಪೂರ್ಣಯ್ಯ ಸ್ಮಾರಕ ಭವನದಲ್ಲಿ ಪ್ರಮಾಣ ಪತ್ರ ಪ್ರದಾನ ಸಮಾರಂಭ ನಡೆಯಲಿದೆ. ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರೊ.ಶ್ರೀನಿವಾಸ ವರಖೇಡಿ ಉದ್ಘಾಟಿಸುವರು. ಡಾ.ವೈ.ಎಸ್. ಸಿದ್ದೇಗೌಡ ಪ್ರಮಾಣಪತ್ರ ಪ್ರದಾನ ಮಾಡುವರು. ಡಾ.ಎಸ್. ಕೃಷ್ಣಕುಮಾರ್ ಅಧ್ಯಕ್ಷತೆ ವಹಿಸುವರು.
ಸಂತೋಷಕೂಟ
ಅಖಿಲ ನಾಮಧಾರಿಗೌಡ ಸಂಘದ ವತಿಯಿಂದ ಜು.13ರ ಬೆಳಗ್ಗೆ 8ಕ್ಕೆ ಹುಣಸೂರು ರಸ್ತೆಯಲ್ಲಿರುವ ಮುಲಕನಾಡು ಭವನದಲ್ಲಿ ಸಂತೋಷಕೂಟ ನಡೆಯಲಿದೆ. ದೂ.2342563 ಸಂಪರ್ಕಿಸಬಹುದು.