ವಚನಗಳ ಸಾರದಿಂದ ಸಮಾಜದ ಉದ್ಧಾರ

Updated on: 

ಚಾಮರಾಜನಗರ: ಶರಣರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಮಾಜದ ಉದ್ಧಾರ ಸಾಧ್ಯವಾಗಲಿದೆ ಎಂದು ಸಕಲೇಶಪುರ ಜೆಎಸ್‌ಎಸ್ ಪಪೂ ಕಾಲೇಜಿನ ಉಪನ್ಯಾಸಕಿ ಎಸ್. ಗೀತಾ ಅಭಿಪ್ರಾಯಪಟ್ಟರು.
ನಗರದ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಮಹಾಮನೆಯಲ್ಲಿ ನಡೆದ ಶರಣ ಚಿಂತನ ಸಿಂಚನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ವಚನ ಸಾಹಿತ್ಯದಲ್ಲಿ ವಿಶ್ವದ ಅಭಿವೃದ್ಧಿಯ ಸಾರವೇ ಅಡಗಿದೆ. ಶರಣರು ನಿಸ್ವಾರ್ಥ ಬದುಕು ಸಾಗಿಸುವ ಜೊತೆಗೆ ವಚನಗಳ ಮೂಲಕ ಮೌಢ್ಯ ಹಾಗೂ ಕಂದಾಚಾರಗಳಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.  
ಪ್ರಸ್ತುತ ಸಮಾಜದಲ್ಲಿ ಅತ್ಯಾಚಾರ, ಭ್ರಷ್ಟಾಚಾರ, ಲಿಂಗಬೇಧ, ವರ್ಗಬೇಧ, ವರ್ಣಬೇಧ, ಹಸಿವು, ಕ್ರೌರ್ಯ, ವಂಚನೆ, ಭಯೋತ್ಪಾದನೆ ಹಾಗೂ ಅರ್ಥಿಕ ಹಿಂಜರಿತ ಇಂತಹ ಸಮಸ್ಯೆಗಳಿಗೆ ಅಂದಿನ ಶರಣರು ವಚನಗಳ ಮೂಲಕ ಪರಿಹಾರ ಕಂಡುಕೊಂಡಿದ್ದರು. ನಮ್ಮ ಜೀವನವನ್ನು ಹೇಗೆ ರೂಪಿಸಿಕೊಂಡು ಅನ್ಯರಿಗೆ ತೊಂದರೆಯಾಗದಂತೆ ಮಾದರಿ ಸಮಾಜ ನಿರ್ಮಿಸಬಹುದು ಎಂಬ ಕಲ್ಪನೆ ವಚನ ಸಾಹಿತ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು. ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಪಾಲನೆಗಾಗಿ ಅಳವಡಿಸಿಕೊಂಡಿರುವ 30 ಅಂಶಗಳು ಸಹ ಶರಣರ ವಚನದಲ್ಲಿ ಇವೆ,  ಪ್ರಸ್ತುತ ಪೋಷಕರು  ಬಸವ ತತ್ವಗಳನ್ನು ಪಾಲನೆ ಮಾಡುವ ಅಗತ್ಯತೆ ಇದೆ.  ತಮ್ಮ ಮಕ್ಕಳಿಗೆ ದಿನನಿತ್ಯ ಪಠ್ಯ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ  ಶರಣರ ಚಿಂತನೆಗಳ ತಿಳಿಸುವ ಪ್ರಯತ್ನ ಮಾಡಬೇಕು ಎಂದರು.  ಆರ್. ಪುಟ್ಟಮಲ್ಲಪ್ಪ ಮಾತನಾಡಿದರು.
ಆರ್.ಎಂ. ಸ್ವಾಮಿ,  ಎಲ್. ದೇವಣ್ಣ, ಕುಮಾರ್, ರಮೇಶ್, ಗುರುಸ್ವಾಮಿ, ಶಶಿಧರ್, ಬಿ. ಸಿದ್ದಮಲ್ಲಪ್ಪ, ಬಿ.ಪಿ. ಪ್ರಕಾಶ್, ಮಹದೇವಸ್ವಾಮಿ, ಶಿವಲಿಂಗಪ್ಪ, ಆರ್.ಎಸ್. ಲಿಂಗರಾಜು, ಕಾಳನಹುಂಡಿ ಗುರುಸ್ವಾಮಿ, ಬಿ. ರವಿಶಂಕರ್ ಮೊದಲಾದವರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com