ಅಪ್ರಾಪ್ತೆ ಅತ್ಯಾಚಾರ: ಆರೋಪಿ ಸೆರೆ

Updated on: 

ಕೊಳ್ಳೇಗಾಲ: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಆರೋಪಿಯೊಬ್ಬನನ್ನು ಹನೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತನನ್ನು ವಿನೋದರಾಜು ಎಂದು ಗುರುತಿಸಲಾಗಿದ್ದು, ಈತ  ಹನೂರಿನಲ್ಲಿ ವ್ಯಾಸಂಗ ಮಾಡಲು ಸಂಬಂಧಿಕರ ಮನೆಗೆ  ಬಂದಿದ್ದ 15ವರ್ಷದ ಬಾಲಕಿಯನ್ನು ವಿನೋದರಾಜು ಪ್ರೀತಿಯ ನಾಟಕವಾಡಿ ನಂಬಿಸಿ ಜು.24ರಂದು ಅಪಹರಿಸಿದ್ದು, ಈ ಸಂಬಂಧ ಬಾಲಕಿಯ ಪೋಷಕರು ಜು.25ರಂದು ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಹನೂರು ಪೊಲೀಸರು ಜು.26ರಂದು ಬಾಲಕಿಯನ್ನು ಪತ್ತೆ ಹಚ್ಚಿ ರಕ್ಷಿಸಿದ್ದರು. ಆದರೆ, ಅಪಹರಿಸಿ ಪ್ರೀತಿಯ ನಾಟಕವಾಡಿದ್ದ ಆರೋಪಿ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆ ಆರೋಪಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು. ಗುರುವಾರ ಬೆಳಗ್ಗೆ ಕೊಳ್ಳೇಗಾಲ ಬಸ್‌ನಿಲ್ದಾಣದಲ್ಲಿ ಹನೂರು ಪೊಲೀಸರು ಅತ್ಯಾಚಾರಿ ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಕಿರಣಕುಮಾರ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com