ಚಾಮರಾಜನಗರ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಆ.1ರಂದು ಬೆಳಗ್ಗೆ 11 ಗಂಟೆಗೆ ಗುಂಡ್ಲುಪೇಟೆಗೆ ಆಗಮಿಸಿ ಮತ ಕ್ಷೇತ್ರದಲ್ಲಿ ಪ್ರವಾಸ ಮಾಡಿ ಸಾರ್ವಜನಿಕರ ಕುಂದು-ಕೊರತೆ ವಿಚಾರಿಸುವರು. ಸಂಜೆ 5 ಗಂಟೆಗೆ ಮೈಸೂರಿಗೆ ನಿರ್ಗಮಿಸಿ ವಾಸ್ತವ್ಯ ಹೂಡುವರು. ಆ. 2ರಂದು ಬೆಳಿಗ್ಗೆ 10.30ಕ್ಕೆ ನಗರಕ್ಕೆ ಆಗಮಿಸಿ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಬೆಳಗ್ಗೆ 11.30ಕ್ಕೆ ಕೆಡಿಪಿ ಸಭೆಯಲ್ಲಿ ಭಾಗವಹಿಸುವರು. ಸಾರ್ವಜನಿಕರ ಕುಂದು-ಕೊರತೆ ವಿಚಾರಿಸಿ ಸಂಜೆ 5 ಗಂಟೆಗೆ ಮೈಸೂರಿಗೆ ನಿರ್ಗಮಿಸಿ ವಾಸ್ತವ್ಯ ಮಾಡುವರು.ಆ. 3ರಂದು ಬೆಳಗ್ಗೆ 9.30ಕ್ಕೆ ಚಾಮರಾಜನಗರ ತಾಲೂಕಿನ ಕನಕಗಿರಿ ಮಲೆಯೂರು ಭಗವಾನ್ ವಿಜಯಪಾರ್ಶ್ವನಾಥ ಸ್ವಾಮಿ ಮೋಕ್ಷ ಕಲ್ಯಾಣ ಪೂಜೆ, ಮುಕುಟಸ್ವಾಮಿ ಮಹೋತ್ಸವ ಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿನಿಲಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ 5 ಗಂಟೆಗೆ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.
ವಿಜ್ಞಾನ ಶಿಕ್ಷಕರ ನೇಮಕ: ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ (ಪರಿಶಿಷ್ಟ ಜಾತಿ)ಯಲ್ಲಿ ವಿಜ್ಞಾನ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿಲಾಗಿದೆ. ವಿಜ್ಞಾನ ಶಿಕ್ಷಕರನ್ನು ಗೌರವಧನದ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತರು ಶಾಲೆಯ ಪ್ರಾಂಶುಪಾಲರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.