ಪರೀಕ್ಷೆ ತರಬೇತಿ

Updated on: 

ತರೀಕೆರೆ: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ತರೀಕೆರೆ ಶಾಖೆಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಎದುರಿಸುವ ಬಗ್ಗೆ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.  ಮೊಹಮದ್ ಆಕಿಲ್ ಸಂಪನ್ಮೂಲ ವ್ಯಕಿಯಾಗಿ ಭಾಗವಹಿಸಿ ಮಾತನಾಡಿದರು. ಮೊಹಮ್ಮದ್ ಹನ್ನಾನ್, ಫೈಸಲ್ ಪಾಷ, ಹಿದಾಯತ್ ಇದ್ದರು.
--
ಬಹುಮಾನ
ತರೀಕೆರೆ: ಗುಲ್ಬರ್ಗದಲ್ಲಿ ನೆಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಂಗ್ಲಿಷ್ ಭಾಷಣದಲ್ಲಿ ತರೀಕರೆ ವಿದ್ಯಾರ್ಥಿನಿ ಶ್ರೀಗೌರಿ ಅವರಿಗೆ ಪ್ರಥಮ ಬಹುಮಾನ ದೊರಕಿದೆ. ಹೊಸದುರ್ಗ ಸಂತ ಅಂತೋಣಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಶ್ರೀಗೌರಿ ತರೀಕೆರೆಯ ಟಿ.ಎಸ್. ರವಿಕುಮಾರಸ್ವಾಮಿ ಮತ್ತು ಶಕುಂತಲ ಅವರ ಮಗಳು.
--
ಸ್ಥಿರಾಸ್ತಿ ದರ ಪರಿಷ್ಕರಣೆ
ಕಡೂರು ತಾಲೂಕಿನ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆಯನ್ನು ಪರಿಷ್ಕರಿಸಲಾಗಿದ್ದು, ಉದ್ದೇಶಿತ ದರಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಕಡೂರು ಉಪ ನೋಂದಾಣಾಧಿಕಾರಿ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಉದ್ದೇಶಿತ ದರಗಳ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜ. 22ರೊಳಗೆ ಸಲ್ಲಿಸಬಹುದಾಗಿದೆ ಎಂದು ಕಡೂರು ಉಪ ನೋಂದಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com