ಕಡೂರು: ಚಿಕ್ಕಮಗಳೂರು ವಿವಿದೋದ್ದೇಶ ಸಮಾಜ ಸೇವಾ ಸಂಸ್ಥೆಯಿಂದ ಕಡೂರು ಪಟ್ಟಣದಲ್ಲಿ ಎಚ್ಐವಿ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕುರಿತು ಜನ ಜಾಗೃತಿ ಕಾರ್ಯಕ್ರಮ ನಡೆಯಿತು.
ಪಟ್ಟಣದ ಪ್ರೇಮಜ್ಯೋತಿ ಕಾನ್ವೆಂಟಿನ ಸಭಾಂಗಣದಲ್ಲಿ ನಡೆದ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಿಸಿಲಿಯಾ ಮಾತನಾಡಿ, ಎಚ್ಐವಿ ಸೋಂಕಿತರಿಗೆ ಹೆದರುವ ಅಗತ್ಯವಿಲ್ಲ ಬದಲಾಗಿ ಏಡ್ಸ್ ಬಗ್ಗೆ ಜನರು ಜಾಗೃತರಾಗಿ. ಆ ಮೂಲಕ ಸೋಂಕಿತರಿಗೆ ಸಾಂತ್ವನ ಹಾಗೂ ಎಲ್ಲರಂತೆ ನೆಮ್ಮದಿಯ ಜೀವನ ಸಾಗಿಸಲು ಆತ್ಮಸ್ಥೈರ್ಯದ ಮಾತುಗಳು ಬೇಕಿವೆ ಎಂದರು.
ಈ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಏಡ್ಸ್ ಕುರಿತು ಜಾಗೃತಿ ವಹಿಸಬೇಕು ಎಂದರು.
ಸಂಸ್ಥೆಯ ವಿಕಲಚೇತನ ಸಂಯೋಜಕ ಮೋಹನ್, ಆಪ್ತ ಸಮಾಲೋಚಕ ರಮೇಶ್, ಜಯಜ್ಯೋತಿ ಒಕ್ಕೂಟದ ಅಧ್ಯಕ್ಷೆ ಅಸ್ಮಾ, ಸಂಸ್ಥೆಯ ಸಂಯೋಜಕಿ ಲೈಸಾ, ಕಲ್ಪನ, ನೇತ್ರ, ಚಂದ್ರಾನಾಯ್ಕ, ಕವಿತ, ಶೈಲ ಇದ್ದರು.