ಚಿಕ್ಕಮಗಳೂರು: ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಡಿ ಸಾಲ ಪಡೆದು ಅವಧಿ ಮುಗಿದು ಸುಸ್ಥಿದಾರರಾಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳು ಬಾಕಿ ಇರುವ ನಿಗಮದ ಅಸಲನ್ನು ಒಂದೇ ಬಾರಿ ನಿಗಮಕ್ಕೆ ಪಾವತಿಸಿದಲ್ಲಿ ಬಾಕಿ ಇರುವ ಬಡ್ಡಿ ಮನ್ನಾ ಯೋಜನೆಯ ನಿಯಮಗಳ ಪ್ರಕಾರ ಪರಿಶೀಲಿಸಿ ಮನ್ನಾ ಮಾಡಲಾಗುವುದು.
ನಿಗಮದಿಂದ ಸಾಲ ಪಡೆದಿರುವ ಸುಸ್ತಿದಾರರಾಗಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡು ಒಂದೇ ಬಾರಿಗೆ ಬಾಕಿ ಇರುವ ಅಸಲನ್ನು ನಿಗಮಕ್ಕೆ ಪಾವತಿಸಲು ಮತ್ತೊಮ್ಮೆ ವಿನಂತಿಸಿದೆ. ಇದರಿಂದ ಇತರೆ ಅರ್ಜಿದಾರರಿಗೆ ಸಾಲ ಸೌಲಭ್ಯ ಕಲ್ಪಿಸಲು ಅವಕಾಶ ನೀಡಿದಂತಾಗುತ್ತದೆ. ಈ ಸೌಲಭ್ಯ ಮಾರ್ಚ್ 31 ರವರೆಗೆ ಮಾತ್ರ ಇರುತ್ತದೆ.
ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಜಿಲ್ಲಾ ಪಂಚಾಯತ್ ಕಟ್ಟಡ, ಚಿಕ್ಕಮಗಳೂರು ಅಥವಾ ತಾಲೂಕು ಮಟ್ಟದಲ್ಲಿ ತಾಲೂಕು ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ.