ಸಾಧನೆ ಮಾಡುವಂತಹ ಶಿಕ್ಷಣ ಪಡೆಯಿರಿ

Updated on: 

ವಿದ್ಯಾರ್ಥಿನಿಯರಿಗೆ ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ ವೆಂಕಟೇಶನ್ ಸಲಹೆ

ಚಿಕ್ಕಮಗಳೂರು: ವಿದ್ಯಾರ್ಥಿನಿಯರು ಮುಂದಿನ ದಿನಗಳಲ್ಲಿ ಕೇವಲ ಮದುವೆ, ಮಕ್ಕಳಿಗೆ ಸೀಮಿತವಾಗದೆ ಐಎಎಸ್, ಐಪಿಎಸ್ ನಂತಹ ಉನ್ನತ ಶಿಕ್ಷಣಗಳನ್ನು ಪಡೆಯಲು ಮುಂದಾಗಬೇಕು ಎಂದು ಜಿಲ್ಲಾ ಅರಣ್ಯ ಸಂರಕ್ಷಾಣಾಧಿಕಾರಿ ವೆಂಕಟೇಶನ್ ಕರೆ ನೀಡಿದ್ದಾರೆ.
ಜ್ಞಾನವೃದ್ಧಿ: ನಗರದ ಮಲೆನಾಡು ವಿದ್ಯಾಸಂಸ್ಥೆಯ ಸುಂದರಮ್ಮ ಶಂಕರಮೂರ್ತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಲೆನಾಡು ಮಂದಾರ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಜೀವನ ಬಹಳ ದೊಡ್ಡದು. ಸಾಧನೆ ಮಾಡುವುದು ಬಹಳವಿದೆ. ಇಂದಿನ ಪ್ರಪಂಚದಲ್ಲಿ ಓದಿದರೆ ಸಾಲದು, ಸಾಧನೆ ಮಾಡುವಂತಹ ಶಿಕ್ಷಣ ಪಡೆಯಬೇಕು. ಹೆಚ್ಚು ಓದಿದಷ್ಟು ಜ್ಞಾನವೃದ್ಧಿಯಾಗುತ್ತದೆ ಎಂದರು.
ರಾಷ್ಟ್ರಾಭಿಮಾನ: ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯೆಯೊಂದಿಗೆ ವಿನಯವಿದ್ದರೆ ಮಾತ್ರ ಪರಿಪೂರ್ಣ ಮಾನವರಾಗಲು ಸಾಧ್ಯ.
 ಹೆಣ್ಣು ಇಂದು ಸ್ವಾವಲಂಬಿಯಾಗಿ ಬದುಕುವುದನ್ನು ಕಲೆಯಬೇಕು. ಸ್ವಾಭಿಮಾನಿಗಳಾಗಿ ರಾಷ್ಟ್ರಾಭಿಮಾನ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿನಿಯರು ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಿ ನ್ಯಾಯಕ್ಕಾಗಿ ನಿಲ್ಲಬೇಕು ಎಂದು ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ.ಡಿ.ಎಲ್. ವಿಜಯ್‌ಕುಮಾರ್ ಮಾತನಾಡಿ, ಇಂದು ನಮ್ಮ ಸಂಸ್ಥೆ ಜಿಲ್ಲೆಯಲ್ಲಿಯೇ ಹೆಸರಾಂತ ಸಂಸ್ಥೆಯಾಗಿದ್ದು, ಉತ್ತಮ ಆಡಳಿತ, ಉಪನ್ಯಾಸಕರು, ಸದಸ್ಯರಾಗಿರುತ್ತಾರೆ. ವಿದ್ಯಾರ್ಥಿನಿಯರು ಪರೀಕ್ಷೆ ಕಾಲ ಹತ್ತಿರವಾಗುತ್ತಿರುವುದರಿಂದ ಸಮಯ ವ್ಯರ್ಥ ಮಾಡದೇ ಟಿವಿ, ಮೊಬೈಲ್ ಬಳಕೆ ಕಡಿಮೆ ಮಾಡಿ ಸಿದ್ಧರಾಗಬೇಕೆಂದರು.
  ಇದೇ ಸಂದರ್ಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ರುದ್ರಸ್ವಾಮಿ, ಸಂಸ್ಥೆಯ ಉಪಾಧ್ಯಕ್ಷ ಟಿ.ಡಿ. ರಾಜೇಗೌಡ, ಸಹ ಕಾರ್ಯದರ್ಶಿ ಶ್ರೀಧರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಂಕರ್ ಮೂರ್ತಿ, ಸದಸ್ಯ ಎಂ.ಎಸ್. ಅನಂತರಾಮಯ್ಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
 ಅಕ್ಷತ ಭಾರ್ಗವ ಸ್ವಾಗತಿಸಿದರು. ಕಾಲೇಜು ಪ್ರಾಂಶುಪಾಲರಾದ ಜಿ.ಪಿ. ಪುಷ್ಪಲತಾ ವಾರ್ಷಿಕ ವರದಿ ಮಂಡಿಸಿದರು. ಗಜಾಲ ಕಾರ್ಯಕ್ರಮ ನಿರೂಪಿಸಿ, ಫರ ಅಂಜುಂ ವಂದಿಸಿದರು. ನಂತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com