ಕಡೂರು: ಕಾರ್ಮಿಕರು ದುಡಿದ ಹಣದಲ್ಲಿ ಸ್ವಲ್ಪ ಹಣ ಉಳಿಸಿ, ಭವಿಷ್ಯದ ಜೀವನ ಉತ್ತಮವಾಗಿರಲು ಪ್ರಯತ್ನಿಸಬೇಕು ಎಂದು ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ವಿ.ವಾಸು ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಕಡೂರು ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಮುಖಂಡರ ಸಭೆಯಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು 65 ವರ್ಷವಾದರೂ ದೇಶದ ಬಡವರು ಬಡವರಾಗಿಯೇ ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ವ್ಯವಸ್ಥೆಯು ಉಳ್ಳವರ ಪರವಾಗಿರುವುದರಿಂದ ಸಮಾನತೆ ಮತ್ತು ಸಹಬಾಳ್ವೆ ಎಂಬುದು ಘೋಷಣೆಗೆ ಮಾತ್ರ ಸೀಮಿತವಾಗಿರುವುದು ದುರಂತ ಎಂದರು.
ಟಿ.ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಖಜಾಂಚಿ ಎಸ್. ಬಾಲು, ಸಂಘದ ಮುಖಂಡರಾದ ಕಡೂರು ದೇವೇಂದ್ರ, ಕೆ.ಎಚ್. ಓಂಕಾರಪ್ಪ, ಎಲ್.ಎನ್. ದಾನಪ್ಪ, ಸಂಘದ ಕಾರ್ಯದರ್ಶಿ ಸಿ.ಎಚ್. ಮೂರ್ತಿ, ಮುಖಂಡ ಟಿ.ಜಿ. ಲೋಕೇಶಪ್ಪ, ತಂಗಲಿ ಶಿವಮೂರ್ತಿನಾಯ್ಕ, ಶಂಕರಪ್ಪ, ಕೋಟಿ, ಭರತ್, ಗೋವಿಂದಪ್ಪ ಮಹಿಳಾ ಮುಖಂಡರಾದ ಅಮ್ಮಯ್ಯಮ್ಮ, ತಿಮ್ಮಕ್ಕ ಭಾಗವಹಿಸಿದ್ದರು. ಕಾರ್ಯದರ್ಶಿ ದಾನಪ್ಪ ವಂದಿಸಿದರು.
Advertisement