ಚಿಕ್ಕಮಗಳೂರು: ಬೀರೂರಿನ ಜೈನ್ ಟೆಂಪಲ್ ಹಿಂಭಾಗದ ರಸ್ತೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರು ಬೀರೂರಿನ ಜಯಶ್ರೀ ಹಾಗೂ ಕಡೂರಿನ ಜೆ. ಬಾಬು. ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಯಶ್ರೀ ಮನೆ ಮೇಲೆ ಬೀರೂರು ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯಲ್ಲಿದ್ದ ಜಯಶ್ರೀ ಹಾಗೂ ಜೆ. ಬಾಬು ಎಂಬುವವರನ್ನು ವಶಕ್ಕೆ ಪಡೆದರು. ಹಾಗೂ ಅವರ ಬಳಿಯಿದ್ದ ಎರಡು ಮೊಬೈಲ್ ಪೋನ್ ಹಾಗೂ ರು. 1,040 ನಗದನ್ನು ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Advertisement