ರಂಜಾನ್ ಪಡಿತರ ಪ್ಯಾಕೇಜ್ ವಿತರಣೆ

Updated on: 

ಚಿಕ್ಕಮಗಳೂರು: ಅಂಜುಮಾನ್ -ಎ- ಖುದ್ದಾಮ್ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಬಡ ಮುಸ್ಲಿಂ ಕುಟುಂಬಗಳಿಗೆ ರಂಜಾನ್ ಹಬ್ಬದ ಪಡಿತರ ಪ್ಯಾಕೇಜ್ ಅನ್ನು ವಿತರಿಸಲಾಯಿತು.
ಎಂ.ಜಿ. ರಸ್ತೆಯ ತಾಜಾರಿನ್ ಶಾದಿಮಹಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಂಜಾನ್ ಹಬ್ಬಕ್ಕೆ ಬೇಕಾದ ಅಕ್ಕಿ, ಬೇಳೆ, ಸಕ್ಕರೆ, ಎಣ್ಣೆ, ಶ್ಯಾವಿಗೆ, ಮಸಾಲೆ ಸಾಮಗ್ರಿ ಜೊತೆಗೆ ಒಂದು ಕೆ.ಜಿ. ಕೋಳಿಮಾಂಸವನ್ನು ಒಳಗೊಂಡ ಪ್ಯಾಕೇಜ್ ನೀಡಲಾಯಿತು.  
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ ಅಧ್ಯಕ್ಷ ಮಹಮದ್ ಹನೀಫ್ ಮಾತನಾಡಿ, ನಗರದ ಎಲ್ಲ ಬಡಜನರು ಸಂತೋಷದಿಂದ ರಂಜಾನ್ ಹಬ್ಬವನ್ನು ಆಚರಿಸಬೇಕೆಂಬ ಸದುದ್ದೇಶದಿಂದ ಕಳೆದ 12 ವರ್ಷಗಳಿಂದ
ರಂಜಾನ್ ಪ್ಯಾಕೇಜ್ ನೀಡಲಾಗುತ್ತಿದೆ ಎಂದು ತಿಳಿಸಿದರು.  
ಉಪ್ಪಳ್ಳಿ ಮದರಸಾದ ಮುಖ್ಯಸ್ಥ ಮೌಲನಾ ಖ್ವಾಝಾ ಮೊಹಿದ್ದೀನ್ ಧಾರ್ಮಿಕ ಉಪನ್ಯಾಸ ನೀಡಿ, ನ್ಯಾಯ ಮಾರ್ಗದಲ್ಲಿ ಗಳಿಸಿದ ಸಂಪತ್ತಿನಲ್ಲಿ ಶೇ.2.5 ರಷ್ಟನ್ನು ಬಡವರಿಗೆ ದಾನ ಮಾಡಬೇಕೆಂಬುದು ನಿಯಮ. ಇದನ್ನು ಜಕಾತ್ ಎಂದು ಕರೆಯಲಾಗುತ್ತದೆ.
40 ಉಳ್ಳವರು 1 ರಂಜಾನ್ ತಿಂಗಳಿನಲ್ಲಿ ದಾನ ಮಾಡುವುದು ಶ್ರೇಷ್ಠ. ಕುಟುಂಬ ಸಂಬಂಧಿಗಳು ಬಡವರಿದ್ದರೆ ಅವರಿಗೆ ಆದ್ಯತೆಯ ಮೇರೆಗೆ ದಾನ ನೀಡಬೇಕು.
ಒಟ್ಟಾರೆ ಉಳ್ಳವರಿಂದ ಜಕಾತ್ ಸಂಗ್ರಹಿಸಿ ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಸಂಭ್ರಮದಿಂದ ಹಬ್ಬ ಆಚರಿಸಲು ನೆರವಾಗುವ ಯೋಜನೆ ಸಂತೃಪ್ತಿ ತರುತ್ತದೆ ಎಂದು ತಿಳಿಸಿದರು.  
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ವ್ಯವಸ್ಥಾಪಕ ಸಿ.ಆರ್. ಮೊಹಮ್ಮದ್, ನಿವೃತ್ತ ಇಂಜಿನಿಯರ್ ಫಯಾಜ್, ಡಾ. ಅತಾಮೊಹಮ್ಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೆಕ್ಕಾ ಮಸೀದಿಯ ಮೌಲಾನ  ಅಲಿಖಾನ್ ಪವಿತ್ರ ಕುರಾನ್ ಪಠಿಸಿದರು.
ಟ್ರಸ್ಟ್ ಕಾರ್ಯದರ್ಶಿ ಶಕೀಲ್ ಅಹಮ್ಮದ್, ನಿರ್ದೇಶಕ ಆರ್.ಎ. ಸಲಿಂ, ಬಶೀರ್ ಖಾನ್, ನಯ್ಹಾಜುಲ್ಲಾ ಷರೀಫ್, ಎನ್.ಎ. ನಾಜ್ ತಂಡ ಅಧ್ಯಕ್ಷ ಮೊಹಮದ್ ಹನೀಫ್ ನೇತೃತ್ವದಲ್ಲಿ ಜಕಾತ್ ಸಂಗ್ರಹಿಸಿ ರಂಜಾನ್ ಪ್ಯಾಕೇಜ್ ನೀಡುತ್ತಿರುವುದರ ಜೊತೆಗೆ ಬಡಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೂ ನೆರವು ನೀಡುವ ಯೋಜನೆ ಕಾರ್ಯಗತಗೊಳಿಸುತ್ತಿದೆ ಎಂದು ಅಲಿಖಾನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com