ಆಹಾರ ಸುರಕ್ಷತೆ, ಗುಣಮಟ್ಟ ಕಾಯ್ದುಕೊಳ್ಳಿ: ಡಿಸಿ ಸೂಚನೆ

Updated on

ಚಿತ್ರದುರ್ಗ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನುಷ್ಠಾನಗೊಳಿಸುವ ಬಗ್ಗೆ ವರ್ತಕರಿಗೆ ಹಾಗೂ ಗ್ರಾಹಕರಲ್ಲಿ ಅರಿವು ಮೂಡಿಸುವುದು ಹಾಗೂ ಆಹಾರ ತಯಾರಕರ, ವಿತರಕರ ಹಾಗೂ ಸಾಗಾಣಿಕೆದಾರರ, ಹೋಟೆಲ್ ಮತ್ತು ಬಾರ್ ಅಂಡ್ ರೆಸ್ಟೋರೆಂಟ್, ಕ್ಯಾಂಟೀನ್, ಕಲ್ಯಾಣ ಮಂಟಪ ಇವುಗಳ ಪಟ್ಟಿಯನ್ನು ಪಡೆದು ಕಡ್ಡಯವಾಗಿ ನೋಂದಣಿ, ಪರವಾನಗಿ ಪಡೆಯುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿ.ಪಿ. ಇಕ್ಕೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
 ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ಪ್ರಥಮ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಏಪ್ರಿಲ್ 2012 ರಿಂದ 116 ಆಹಾರ ಮಾದರಿ ಸಂಗ್ರಹಣೆ ಮಾಡಿದ್ದು, ಒಟ್ಟು 29 ಪ್ರಕರಣಗಳನ್ನು ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ನ್ಯಾಯ ನಿರ್ಣಯಕ್ಕಾಗಿ ದಾಖಲು ಮಾಡಲಾಗಿದೆ. ಈ ಪೈಕಿ 2 ಪ್ರಕರಣಗಳಿಗೆ ದಂಡ ವಿಧಿಸಲಾಗಿದೆ. ನೋಂದಣಿಗಾಗಿ 347 ಅರ್ಜಿ ಬಂದಿದ್ದು, ಇವುಗಳನ್ನು ನೋಂದಣಿ ಮಾಡಲಾಗಿದೆ. ನೋಂದಣಿ ಶುಲ್ಕ ರು. 34,700 ಸರ್ಕಾರಕ್ಕೆ ಸಂದಾಯವಾಗಿದೆ. ಪರವಾನಗಿಗೆ 126 ಅರ್ಜಿ  ಬಂದಿದ್ದು, ಇದರಲ್ಲಿ 66 ಪರವಾನಗಿ ನೀಡಲಾಗಿದೆ. ಪರವಾನಗಿ ಶುಲ್ಕ ರು. 3.60 ಲಕ್ಷ ಸಂದಾಯವಾಗಿದೆ.
ಹೋಟೆಲ್‌ಗೆ ಭೇಟಿ: ಸಭೆಯ ನಂತರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸದಸ್ಯರ ತಂಡ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿರುವ ಹೋಟೆಲ್ ಚಾಲುಕ್ಯ, ದಾವಣಗೆರೆ ಬೆಣ್ಣೆ ದೋಸೆ ಹೋಟೆಲ್, ಚಾಲುಕ್ಯ ಫುಡ್  ಕಾರ್ನರ್,  ಹೋಟೆಲ್ ನವಯುಗಕ್ಕೆ ಭೇಟಿ ನೀಡಿ ಆಹಾರ ತಯಾರಿಕೆ ಕೋಣೆ, ದಾಸ್ತಾನು ಕೋಣೆ, ಸ್ವಚ್ಛಗೊಳಿಸುವ ಭಾಗ ಇತ್ಯಾದಿ ಪರಿಶೀಲನೆ ನಡೆಸಲಾಯಿತು. ಹೋಟೆಲ್‌ನಲ್ಲಿ ಇದ್ದಂತಹ ನ್ಯೂನತೆ ಸರಿಪಡಿಸಿ ಅಂಕಿತ ಅಧಿಕಾರಿಗಳ ಕಚೇರಿಗೆ ವರದಿ ಮಾಡಲು ಸೂಚಿಸಲಾಯಿತು.
   ಈ ಬಗ್ಗೆ 15 ದಿವಸದೊಳಗೆ ಸರಿಪಡಿಸಿಕೊಳ್ಳದಿದ್ದಲ್ಲಿ ಸದರಿ ಹೋಟೆಲ್‌ಗಳನ್ನು ಆಹಾರ ಸುರಕ್ಷತೆ ಕಾಯ್ದೆಯಡಿ ದಂಡ ಇಲ್ಲವೇ ಮುಚ್ಚಿಸುವ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಯಿತು.
  ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ನಾರಾಯಣಸ್ವಾಮಿ, ಸಮಿತಿ ಸದಸ್ಯರು,  ಡಿ.ಎಚ್.ಒ. ಡಾ. ಮಹಲಿಂಗಪ್ಪ, ಡಿ.ವೈ.ಎಸ್.ಪಿ. ಆಂಜನೇಯ, ಡಿ.ಡಿ.ಪಿ.ಐ. ಮಂಜುನಾಥ್ ಇದ್ದರು.
 ಜಿಲ್ಲಾ ಅಂಕಿತ ಅಧಿಕಾರಿಗಳಾದ ಡಾ.ಬಿ. ಜಯಮ್ಮ ಸಭೆಗೆ ಅಂಕಿ-ಅಂಶಗಳ ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com