ಮುಕ್ತಾಯಕ್ಕಗೆ ಪ್ರಾಮುಖ್ಯತೆ ಶ್ಲಾಘನೀಯ

Published on

ಭರಮಸಾಗರ: ಶೂನ್ಯ ಸಂಪಾದನೆ ಕೃತಿಗಳಲ್ಲಿ ಮುಕ್ತಾಯಕ್ಕ ಮತ್ತು ಅಲ್ಲಮ ಪ್ರಸಂಗ ಸ್ವಾರಸ್ಯಪೂರ್ಣವಾಗಿ ಬಂದಿದೆ ಎಂದು ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನೆಲ್ಲಿಕಟ್ಟೆ ಗ್ರಾಮದಲ್ಲಿ ಶಿವಾನುಭವ ಸಮಿತಿಯಿಂದ ಆಯೋಜಿಸಲಾಗಿದ್ದ ಶ್ರಾವಣ ಸಂಜೆ, ಶರಣ ಶರಣೆಯರ ತಾತ್ವಿಕ ಚಿಂತನಗೋಷ್ಠಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಪ್ರವಚನ ನೀಡಿದರು. ಶಿಕ್ಷಕ ಆರ್. ಶಿವಕುಮಾರ್ ಕುರ್ಕಿ ಮಾತನಾಡಿದರು. ಉಪನ್ಯಾಸಕ ಸಿದ್ದೇಶ್ ಪ್ರಾಸ್ತಾವಿಸಿದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಮದ ಬಿ.ಕೆ. ಶರಣಪ್ಪ ಪಟೇಲರು ವಹಿಸಿದ್ದರು.  ಸಾಣೇಹಳ್ಳಿ ಶಿವ ಸಂಚಾರ ಮತ್ತು ಗ್ರಾಮದ ಮುರಾರ್ಜಿ ಶಾಲಾ ಮಕ್ಕಳಿಂದ ವಚನ ಗೀತೆ ಗಾಯನ ಏರ್ಪಡಿಸಲಾಗಿತ್ತು.
ಲೋಕಸಭಾ ಸದಸ್ಯ ಚಂದ್ರಪ್ಪ, ಮಾಜಿ ಶಾಸಕ ಚಂದ್ರಪ್ಪ, ಮಂಜುನಾಥಪ್ಪ, ಮಾಜಿ ಜಿಪಂ ಸದಸ್ಯ ಶರಣಪ್ಪ, ತಾಪಂ ಅಧ್ಯಕ್ಷ ರಾಜ್‌ಕುಮಾರ್, ತಾಪಂಸದಸ್ಯರಾದ ರಂಗಮ್ಮ, ಶೇಖರಪ್ಪ, ಮುಖಂಡ ಶೈಲೇಶ್, ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ರಾಜಪ್ಪ, ಸದಸ್ಯರಾದ ಮಂಜುಳ, ಪುಷ್ಪಲತಾ, ಶರಣಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತಪ್ಪ ಇದ್ದರು.

ವಿದ್ಯಾರ್ಥಿಗಳಿಗೆ  ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಉತ್ತಮ ವೇದಿಕೆ: ನಿರ್ವಾಣಪ್ಪ
ಹೊಳಲ್ಕೆರೆ: ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ ಉತ್ತಮ ವೇದಿಕೆಯಾಗಿದೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಹಾಗೂ ಅನಾಥ ಸೇವಾಶ್ರಮದ ಕಾರ್ಯನಿರ್ವಹಣಾಧಿಕಾರಿ ಎ.ಎಸ್. ನಿರ್ವಾಣಪ್ಪ ಹೇಳಿದರು.
ತಾಲೂಕಿನ ಮಲ್ಲಾಡಿಹಳ್ಳಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಏಳ್ಗೆಗಾಗಿ ಸದಾ ಪ್ರೋತ್ಸಾಹ ನೀಡುತ್ತಿರುವ ಉತ್ತಮ ಸಂಸ್ಥೆ ಇದಾಗಿದ್ದು, ಇಲ್ಲಿ ವಿದ್ಯಾರ್ಥಿಗಳ ಸುರಕ್ಷತೆ, ಉತ್ತಮ ವಿದ್ಯಾಭ್ಯಾಸ, ಯೋಗ ಮತ್ತು ಆಯುರ್ವೇದ ಚಿಕಿತ್ಸೆಯಂತಹ ಸೌಕರ್ಯ ನೀಡಲಾಗುತ್ತಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಚನ್ನಗಿರಿ ಸ್ನಾತಕೋತ್ತರ ವಿಭಾಗದ ಸಮಾಜಶಾಸ್ತ್ರ ವಿಭಾಗದ ಸಂಯೋಜನಾಧಿಕಾರಿ ಡಾ. ಬಿ. ಆನಂದ್, ಪದವಿಪೂರ್ವ ಶಿಕ್ಷಣದ ನಂತರ ವಿದ್ಯಾರ್ಥಿಗಳ ಆಯ್ಕೆಗಳು ಹೇಗಿರಬೇಕು ಎಂಬುದನ್ನು ವಿವರಿಸಿ ಇಂದು ಕಂಪ್ಯೂಟರ್ ಬಗ್ಗೆ ಮಾಹಿತಿಯನ್ನು ಹೆಚ್ಚಾಗಿ ಹೊಂದಿರಬೇಕು. ದಿನನಿತ್ಯ ಸಮಾಜದಲ್ಲಿ ಪ್ರಸ್ತುತ ಆಗುತ್ತಿರುವ ಬದಲಾವಣೆಗಳ ಕುರಿತಂತೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಟಿ.ಎಚ್. ಗುಡ್ಡಪ್ಪ ಮಾತನಾಡಿದರು. 2013-14 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿಭಾಗದಲ್ಲಿ ಶೇ.100 ರಷ್ಟು ಫಲಿತಾಂಶ ಪಡೆದ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಅವರ ಉಪನ್ಯಾಸಕರಾದ ಶಿವಕುಮಾರ್, ಡಿ. ಸತೀಶ್, ಮತ್ತು ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಗಿರೀಶ್ ಸ್ವಾಗತಿಸಿ, ಸಿದ್ಧಲಿಂಗಮ್ಮ ವಂದಿಸಿ, ಕೆ. ವೀರಣ್ಣ ನಿರೂಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com