ಭರಮಸಾಗರ: ವಚನಗಳು ಕನ್ನಡ ಸಾಹಿತ್ಯದ ಅನರ್ಘ್ಯ ರತ್ನಗಳು. ಅವುಗಳಿಂದ ಮಾನವನ ಬದುಕು ಸಾರ್ಥಕತೆ ಪಡೆದುಕೊಳ್ಳುತ್ತದೆ. ವಚನಕಾರರನ್ನು ಶ್ರಾವಣ ಸಂಜೆ ಕಾರ್ಯಕ್ರಮದ ಮೂಲಕ ಪರಿಚಯಿಸುವ ಕಾರ್ಯಕ್ರಮ ಈ ಭಾಗದ ಜನರಿಗೆ ಸ್ವಾಮೀಜಿಗಳು ನೀಡುತ್ತಿರುವ ದೊಡ್ಡ ವರವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ಎನ್. ಚಂದ್ರಪ್ಪ ಅಭಿಪ್ರಾಯಪಟ್ಟರು.
ಸಮೀಪದ ನೆಲ್ಲಿಕಟ್ಟೆ ಗ್ರಾಮದಲ್ಲಿ ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಶಿವಾನುಭವ ಸಮಿತಿಯಿಂದ ಆಯೋಜಿಸಲಾಗಿದ್ದ 8ನೇ ದಿನದ ಶ್ರಾವಣ ಸಂಜೆ, ಶರಣ ಶರಣೆಯರ ತಾತ್ವಿಕ ಚಿಂತನಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಪ್ರತೀ 20 ನಿಮಿಷಕ್ಕೆ ಒಂದು ಮಗು ಶುದ್ಧ ನೀರಿನ ಕೊರತೆಯಿಂದ ಸಾವನಪ್ಪುತ್ತಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ವರದಿ ನೀಡಿದೆ. ಕಾರಣ ಕ್ಷೇತ್ರದ ಜನತೆ ಗುಡಿ ಗೋಪುರಗಳನ್ನು ಬಿಟ್ಟು ನೀರು, ರಸ್ತೆ ಇತರೆ ಸೌಲಭ್ಯದ ಬಗೆಗೆ ಹೆಚ್ಚು ಒಲವು ತೋರಬೇಕು ಎಂದು ಮನವಿ ಮಾಡಿದರು. ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಎಂ. ಚಂದ್ರಪ್ಪ, ಎಚ್. ಎಂ. ಮಂಜುನಾಥ್, ಡಿ.ವಿ. ಶರಣಪ್ಪ, ಎನ್.ಟಿ. ರಾಜ್ ಕುಮಾರ್, ರಂಗಮ್ಮ, ಟಿ.ಜಿ. ಶೆಖರಪ್ಪ, ಶೈಲೇಶ್, ಚಂದ್ರಮ್ಮ, ಮಂಜುಳ, ಪುಷ್ಪಲತ, ಶರಣಪ್ಪ, ಉಪನ್ಯಾಸಕ ಸಿದ್ದೇಶ್, ಬಿ.ಕೆ. ಶರಣಪ್ಪ, ಶಿಕ್ಷಕ ಆರ್. ಶಿವಕುಮಾರ್ ಕುರ್ಕಿ ಇದ್ದರು.
Advertisement