ಹೊಂದಾಣಿಕೆ ಇದ್ದಲ್ಲಿ ನೆಮ್ಮದಿ

Updated on

ಚಿತ್ರದುರ್ಗ: ಜೀವನವು ಸುಖ ಸಂತೋಷ ನೆಮ್ಮದಿಯಿಂದ ಸಾಗಬೇಕಾದರೆ ತಾಳ್ಮೆ, ಸಹನೆ, ಹೊಂದಾಣಿಕೆ ಅವಶ್ಯಕ ಎಂದು ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಮಂಗಳವಾರ ನಡೆದ 24ನೇ ವರ್ಷದ 8ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜೀವನದಲ್ಲಿ ಸಂಸಾರಿ ಜೀವನ ಮತ್ತು ಸನ್ಯಾಸ ಜೀವನ ಯಾವುದು ಶ್ರೇಷ್ಠ ಎನ್ನುವುದಕ್ಕೆ ದಾಸಿಮಯ್ಯ ಅವರು “¬ÈÚß½VÚ×Ú ಮನದಲ್ಲಿ ಯಾವುದರ ಬಗ್ಗೆ ಆಸಕ್ತಿ ಇದೆ ಮತ್ತು ಅರ್ಥ ಮಾಡಿಕೊಂಡಿದ್ದೀರಿ ಅದನ್ನೇ ಆಯ್ಕೆ ಮಾಡಿಕೊಂಡರೆ ಅದೇ ËæÃÞÎÚr’ ಎಂದು ಹೇಳಿರುವುದನ್ನು ನೆನೆದರು.
ಡಾ. ಶಿವಮೂರ್ತಿ ಮುರುಘಾ ಶರಣರು 256 ಅಡಿ ಎತ್ತರದ ಬಸವೇಶ್ವರರ ಮೂರ್ತಿಯನ್ನು ನಿರ್ಮಿಸಲು ಚಾಲನೆ ನೀಡಿದ್ದಾರೆ. ಇದು ವಿಶ್ವದ 3ನೇ ಅತಿ ದೊಡ್ಡ ಪ್ರತಿಮೆ ಆಗಲಿದೆ.  ಚಿತ್ರದುರ್ಗವು ವಿಶ್ವಭೂಪಟದಲ್ಲಿ ತನ್ನದೇ ಆದಂತಹ ಸ್ಥಾನ ಪಡೆಯಲು ಸಹಕಾರಿ ಆಗುತ್ತದೆ. 12ನೇ ಶತಮಾನದ ಬಸವಣ್ಣ ಅವರು 21ನೇ ಶತಮಾನದ ಡಾ.ಶಿವಮೂರ್ತಿ ಮುರುಘಾ ಶರಣರ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಿತಾ ಬಸವರಾಜ್ ಮಾತನಾಡಿ, ಶ್ರೀಮಠವು ಯಾವುದೇ ಕಟ್ಟಳೆಗಳಿಗೆ ಒಳಗಾಗದೆ ವಿವಾಹ ಮಹೋತ್ಸವ ನೆರವೇರಿಸುತ್ತ ಜಾತಿ-ಪಂಥ ಭೇದವಿಲ್ಲದೆ ಜಾತಿಗಿಂತ ನೀತಿ ಮುಖ್ಯ ಎನ್ನುವುದನ್ನು ಪಾಲಿಸುತ್ತಿದೆ. 12ನೇ ಶತಮಾನದ ಶಿವಶರಣರ ಆದರ್ಶಗಳಿಗೆ ಹೊಂದಿಕೊಂಡು ಶಿವಮೂರ್ತಿ ಮುರುಘಾ ಶರಣರು ವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ವರದಕ್ಷಿಣೆ, ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗಗಳ ನಿರ್ಮೂಲನೆಗೆ ಶ್ರಮಿಸುತ್ತಿದ್ದಾರೆ. ನವ ವಧು-ವರರು ತಮ್ಮ ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಿ ಎಂದರು. ಇದೇ ಸಂದರ್ಭದಲ್ಲಿ 11 ಜೋಡಿ ನವ ವಧುವರರು ದಾಂಪತ್ಯಕ್ಕೆ ಅಡಿಯಿಟ್ಟರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಗಿರಿ ಜಾನಕಲ್ ಅತಿಥಿಯಾಗಿ ಭಾಗವಹಿಸಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಸಿ.ಎಂ. ಚಂದ್ರಪ್ಪ ಸ್ವಾಗತಿಸಿ, ಜ್ಞಾನಮೂರ್ತಿ ವಂದಿ ಸಿದರು. ಪ್ರದೀಪ್‌ಕುಮಾರ್ ನಿರೂಪಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com