ಹೊಸದುರ್ಗ: ಶಾಲೆಗಳಲ್ಲಿ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಶಿಕ್ಷಕರು ಗುರುತಿಸಬೇಕು ಎಂದು ತಾ.ಪಂ. ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.
ಶನಿವಾರ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಪೈಕಾ ಹಾಗೂ ದಸರಾ ಕ್ರೀಡಾ ಕೂಟ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕಿನಲ್ಲಿ ಕ್ರೀಡೆಗೆ ವಿಪುಲವಾದ ಅವಕಾಶಗಳಿದ್ದು ಶಾಲೆಗಳಲ್ಲಿ ವಿಶೇಷವಾಗಿ ಆಸಕ್ತಿ ಹೊಂದಿರುವ ಕ್ರೀಡೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಕ್ರೀಡಾಕೂಟ ಉದ್ಘಾಟಿಸಿದ ಜಿ.ಪಂ. ಉಪಾಧ್ಯಕ್ಷೆ ಅನಿತಾ ಬಸವರಾಜ್, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬೆಳಗುವಂತಹ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಪ್ರತಿಜ್ಞಾ ವಿಧಿ ಬೋಧಿಸಿದ ಜಿ.ಪಂ. ಸದಸ್ಯ ಹನುಮಂತಪ್ಪ, ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆ ಮುಖ್ಯ ಎಂದರು. ತಾಲೂಕಿನಾದ್ಯಂತ ನಡೆಯುವ ಶಾಲೆಗಳ ಕ್ರೀಡಾ ಕೂಟಗಳಿಗೆ ಕ್ರೀಡಾ ಇಲಾಖೆ ನೆರವು ನೀಡುವ ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಚಂದ್ರಶೇಖರ್, ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಚೆಲುವರಾಜ್, ಕಸಾಪದ ಕಾರ್ಯದರ್ಶಿ ನಾಗತಿಹಳ್ಳಿ ಮಂಜುನಾಥ್, ದೈಹಿಕ ಶಿಕ್ಷಕರು ಹಾಜರಿದ್ದರು.
ಕಂಗುವಳ್ಳಿ ಬಾಲಕಿಯರು, ನಾಗತಿಹಳ್ಳಿ ಬಾಲಕರು ಮೇಲುಗೈ
ಹೊಸದುರ್ಗ ತಾಲೂಕು ಪೈಕಾ ಕ್ರೀಡಾಕೂಟದಲ್ಲಿ ಕಂಗುವಳ್ಳಿ ಬಾಲಕಿಯರು, ದಸರಾ ಕ್ರೀಡಾಕೂಟದಲ್ಲಿ ನಾಗತಿಹಳ್ಳಿ ಬಾಲಕರು ಮೇಲುಗೈ ಸಾಧಿಸಿದ್ದಾರೆ.ಪೈಕಾ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ಕಂಗುವಳ್ಳಿಯ ಅಂಬಿಕಾ ನೂರು ಮೀ. ಓಟ, 400 ಮೀ. ಓಟ, 4 ್ಗ 100 ಮೀ. ರಿಲೇಯಲ್ಲಿ ಪ್ರಥಮ, ಪೂಜಾ 3 ಸಾವಿರ ಓಟದಲ್ಲಿ, ಪೂಜಾ ಎಚ್.ಪಿ. 800 ಮೀ. ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಗುಂಡು ಎಸೆತದಲ್ಲಿ, ಚಕ್ರ ಎಸೆತದಲ್ಲಿ ಶ್ವೇತಾ ಪ್ರಥಮ, ಎತ್ತರ ಜಿಗಿತದಲ್ಲಿ ಪೂಜಾ ಪ್ರಥಮ ಸ್ಥಾನ ಪಡೆದು ಅಥ್ಲೆಟಿಕ್ಸ್‌ನಲ್ಲಿ ಮೇಲುಗೈ ಸಾಧಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಕಂಗುವಳ್ಳಿ ನೂರು ಮೀ ಓಟದಲ್ಲಿ, ರಿಲೇಯಲ್ಲಿ ಶಿವಣ್ಣ ಪ್ರಥಮ ಸ್ಥಾನ, 400 ಮೀ. ಓಟದಲ್ಲಿ ಗಿರಿಶ್ ಪ್ರಥಮ, 800 ಮೀ. ಓಟದಲ್ಲಿ ಕುಮಾರ್ ಪ್ರಥಮ, 1500 ಮೀ. ಓಟದಲ್ಲಿ ಸಂತೋಷ್ ಪ್ರಥಮ, 3 ಸಾವಿರ ಮೀಟರ್ ಓಟದಲ್ಲಿ ಬೋಗೇಶ್ ಪ್ರಥಮ ಸ್ಥಾನ ಗಳಿಸಿದ್ದು, ಹಲವು ಕ್ರೀಡೆಗಳಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳು ಬಹುತೇಕ ಕಂಗುವಳ್ಳಿ ಬಾಲಕರ ಪಾಲಾಗಿವೆ. ಗುಂಡು ಎಸೆತದಲ್ಲಿ ಮಧುಸೂದನಚಾರಿ ಪ್ರಥಮ, ಉದ್ದ ಜಿಗಿತದಲ್ಲಿ ಪ್ರದೀಪ ಮೊದಲ ಸ್ಥಾನಗಳಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ.
Advertisement