ಚಳ್ಳಕೆರೆ: ಕ್ರೀಡೆಗಳು ಸಹ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೊಳಿಸಲಬಲ್ಲವು. ಶಿಕ್ಷಣ ಕ್ಷೇತ್ರದ ಒಂದು ಅವಿಭಾಜ್ಯ ಅಂಗವಾಗಿ ಕ್ರೀಡಾ ಕ್ಷೇತ್ರ ಬೆಳೆಯುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಸಹ ಎಲ್ಲಾ ರೀತಿಯ ಕ್ರೀಡೆಗಳನ್ನು ಕಾಣಬಹುದಾಗಿದೆ. ಕ್ರೀಡೆಯಲ್ಲಿ ಸಾದನೆ ಮಾಡುವವರು ಶಾಲೆಯ ಮತ್ತು ಗ್ರಾಮದ ಗೌರವ ಹೆಚ್ಚಿಸುತ್ತಾರೆ. ಈ ನಿಟ್ಟಿನಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪುರಸಭಾ ಅಧ್ಯಕ್ಷ ಎಂ. ಮಂಜುನಾಥ್ ತಿಳಿಸಿದರು.
ಅವರು ಇಲ್ಲಿನ ಬಿಎಂ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕಸಬಾ ಹೋಬಳಿ ಮಟ್ಟದ ಕ್ರೀಡಾ ಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಿಂದ ಶಾರೀರಿಕ ಬೆಳವಣಿಗೆ ಉತ್ತಮಗೊಂಡು ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಜಣ್ಣ ಮಾತನಾಡಿ, ಇಂದು ಏರ್ಪಡಿಸಿರುವ ಕಸಬಾ ಮಟ್ಟದ ಕ್ರೀಡಾ ಕೂಟದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಕ್ರೀಡಾಪಟುಗಳು ಗುಣಾತ್ಮಕ ಕ್ರೀಡೆಯತ್ತ ಹೆಚ್ಚು ಒತ್ತು ನೀಡಬೇಕೆಂದರು.
ಕ್ಷೇತ್ರ ಸಮನ್ವಯಾಧಿಕಾರಿ ಆರ್. ಹನುಮಂತರಾಯ, ಬಿಎಂ.ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸಂಪತ್ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆರ್. ಮಾರುತೇಶ್, ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷೆ ಸಣ್ಣ ಸೂರಮ್ಮ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಮಾರಣ್ಣ, ಸೂರನಾಯಕ, ಸಿ.ಟಿ. ವೀರೆಶ್, ದೈಹಿಕ ಶಿಕ್ಷಕರಾದ ಎಸ್. ತಿಪ್ಪೇಸ್ವಾಮಿ, ಘಟಪ್ಪ, ಶ್ರೀನಿವಾಸ್ ಮುಂತಾದವರು ಪಾಲ್ಗೊಂಡಿದ್ದರು.
Advertisement