ಶ್ರೀರಾಂಪುರ: ಬಾಗಲಕೋಟೆ ಜಿಲ್ಲೆಯ ಸೋಳಿಕೇರಿಯಲ್ಲಿ ಕೊಳವೆ ಬಾವಿಗೆ ಮಗು ಬಿದ್ದ ಘಟನೆಗೆ ಸಂಭಂದಿಸದಂತೆ ಪಿಡಿಓ ಹಾಗೂ ಪಿಅರ್‌ಇಡಿ ಎಇಇ ಅಮಾನತು ಮಾಡಿರುವುದನ್ನು ಹಿಂಪಡೆಯಬೇಕೆಂದು ಪ್ರತಿಭಟಿಸಿ ಹೊಸದುರ್ಗ ತಾಲೂಕಿನ ಪಂಚಾಯತ್ ರಾಜ್ ಇಲಾಖೆಯ ನೌಕರರು ಬುದವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸರ್ಕಾರ ಕೊಳವೆ ಬಾವಿಗಳಲ್ಲಿ ಅವಘಡಗಳು ಸಂಭವಿಸಿದರೆ ಸ್ಥಳೀಯ ಗ್ರಾಪಂಗಳ ಪಿಡಿಓಗಳ ವಿರುದ್ಧ ಕ್ರಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸಲಾಗುವುದು ಎಂದು ಸುತ್ತೋಲೆ ಹೊರಡಿಸಿ ಅದೇಶ ಮಾಡುತ್ತಿರುವುದು ಸರಿಯಲ್ಲ. ರೈತರ ಜಮೀನುಗಳಲ್ಲಿ ಕೊಳವೆ ಬಾವಿ ಕೊರೆಸುವ ಮುನ್ನ ಕಂದಾಯ ಇಲಾಖೆ ಪರವಾನಿಗೆ ಪಡೆಯುವುದು ಸೇರಿದಂತೆ ಇತರೆ ನಿಯಮಗಳನ್ನು ಜಾರಿಗೆ ತಂದು ಅವಘಡ ಸಂಭವಿಸದಂತೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಗ್ರಾಪಂ ನೌಕರರ ಮೇಲೆ ಕಾನೂನು ಕ್ರಮ ಕೈಗೊಳ್ಳವುದನ್ನು ಬಿಡಬೇಕು. ಹಾಗೂ ಜಮೀನುಗಳಲ್ಲಿ ಕೊರೆಯಿಸಿದ ಬಾವಿಗಳಲ್ಲಿ ನೀರು ಬಾರದಿದ್ದಾಗ ಮುಚ್ಚದೆ ಇರುವುದು ಗ್ರಾಪಂಗಳಿಗೆ ಮಾಹಿತಿ ಸಿಗುವುದಿಲ್ಲ. ಕುಡಿವ ನೀರಿಗಾಗಿ ಕೊರೆಯಿಸುವ ಕೊಳವೆ ಬಾವಿಗಳು ಗ್ರಾಮಠಾಣದ ಪರಿಮಿತಿಯಲ್ಲಿ ಬರುವುದರಿಂದ ಗ್ರಾಪಂನಿಂದ ಅಂತಹ ಕೊಳವೆ ಬಾವಿಗಳನ್ನು ಮುಚ್ಚಲಾಗುವುದು ಎಂದು ಪಿಡಿಓಗಳು ಈ ಸಂದರ್ಭದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ನೌಕರರ ಸಂಘದ ಪದಾಧಿಕಾರಿಗಳಾದ ಸ್ವಾಮಿ, ಓಂಕಾರಪ್ಪ, ವಿಜಯಕುಮಾರ್ ಮೂರ್ತ್ತಪ್ಪ, ರಮೇಶ್, ಜಯಣ್ಣ, ನಾಗರಾಜ್, ನಯಾಜ್, ಶಾಂತಕುಮಾರ್, ಹಾಗೂ ತಾಲೂಕಿನ 33ಗ್ರಾಪಂಗಳ ನೌಕರರ ಬಾಗವಹಿಸಿದ್ದರು.
Advertisement