ಶ್ರೀರಾಂಪುರ: ಕಳೆದ 2 ದಿನಗಳಿಂದ ಪಟ್ಟಣದ ಸರ್ಕಾರಿ ಶಾಲಾ ಆವರಣದಲ್ಲಿ ನೆಡೆಯುತ್ತಿರುವ ಶ್ರೀರಾಂಪುರ ಹೋಬಳಿ ಮಟ್ಟದ ಪ್ರೌಡಶಾಲೆಗಳ ಕ್ರೀಡಾಕೂಟ ಗದ್ದಲದ ನಡುವೆ ಬುಧವಾರ ಮುಕ್ತಾಯವಾಯಿತು.
ಕಬ್ಬಡಿ ಪಂದ್ಯದ ಫೈನಲ್ ಆಟದಲ್ಲಿ ವೆಂಗಳಾಪುರ ಶಾಲೆ ಹಾಗೂ ಶ್ರೀರಾಂಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ತಂಡಗಳು ಆಟವಾಡುತ್ತಿದ್ದವು. ಔಟ್ ನೀಡುವ ವಿಚಾರದಲ್ಲಿ ತೀರ್ಪುಗಾರರು ಹಾಗೂ ಶ್ರೀರಾಂಪುರ ಕಾಲೇಜಿನ ತಂಡದ ಅಭಿಮಾನಿ ಗುಂಪಿನ ನಡುವೆ ಘರ್ಷಣೆ ಉಂಟಾಯಿತು. ಸರಿಯಾಗಿ ತೀರ್ಪು ನೀಡುತ್ತಿಲ್ಲ ಹಾಗಾಗಿ ನಾವು ಆಟ ನೆಡೆಸಲು ಬಿಡುವುದಿಲ್ಲ ಎಂದು ಅಭಿಮಾನಿಗಳು ಹಟ ಹಿಡಿದರು. ತೀರ್ಪುಗಾರರ ವಿರುದ್ಧ ಹರಿಹಾಯ್ದರು. ಇದರಿಂದ ಮನನೊಂದ ತೀರ್ಪುಗಾರರು ನಾವು ಆಟ ಆಡಿಸುವುದಿಲ್ಲ ಎಂದು ತೆರಳಿದರು. ಕ್ರೀಡಾಕೂಟದ ಸಂಘಟಕರು ಪೊಲೀಸ್ ನೆರವಿನಲ್ಲಿ ಎರಡು ತಂಡಗಳ ವ್ಯವಸ್ಥಾಪಕರನ್ನು ಕರೆದು ಮನಮೊಲಿಸಿ ಆಟ ನೆಡೆಸಲು ಮುಂದಾದರೂ ದೈಹಿಕ ಶಿಕ್ಷಕರು ಸ್ಥಳೀಯರ ಆಕ್ರೋಶ ಕಂಡು ಆಟ ನೆಡೆಸಲು ಮುಂದೆ ಬಾರದ ಕಾರಣ ಕಬಡಿ ಪಂದ್ಯ ಹೊರತುಪಡಿಸಿ ಎಲ್ಲಾ ಆಟಗಳ ಫಲಿತಾಂಶ ಪ್ರಕಟಿಸಿ ಕ್ರೀಡಾಕೂಟ ಮುಕ್ತಾಯಗೊಳಿಸಿದರು.
Advertisement