ಅಜೆಕಾರು: ಮದ್ಯ ವ್ಯಸನಿಯೊಬ್ಬರು ಬಾವಿಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಕೆರ್ವಾಶೆ ಗ್ರಾಮದಲ್ಲಿ ಎತ್ತಲಗುಡ್ಡೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತರು ರಾಜು ಪಾಣಾರ (47), ವಿಪರೀತ ಮದ್ಯ ಸೇವೆನೆಯ ಚಟದವರಾಗಿದ್ದು, ಕುಡಿತದ ಚಟ ಬಿಡಲಾಗದೇ, ಆರ್ಥಿಕವಾಗಿ ತೊಂದರೆಗೊಳಗಾಗಿದ್ದರು. ಇದರಿಂದ ಜೀವನದಲ್ಲಿ ಜುಗುಪ್ಸೆಗೊಂಡು ಸೋಮವಾರ ರಾತ್ರಿ ಬಾವಿಯೊಳಗೆ ನೀರು ಸೇದುವ ಹಗ್ಗವನ್ನು ಕುತ್ತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಮಗ ಸಂತೋಷ ನೀಡಿದ ದೂರಿನಂತೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.