ಸುಳ್ಯ: ಸರ್ಕಾರಿ ಸಂಘದ ರೇಶನ್ ಅಂಗಡಿಯಲ್ಲಿ ರೇಶನ್ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾಗ ತನ್ನ ಚಿನ್ನದ ಸರ ಇದ್ದ ಪರ್ಸ್ ಕಾಣೆಯಾಗಿರುವುದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಸುಳ್ಯ ಜೂನಿಯರ್ ಕಾಲೇಜಿನ ಬಳಿಯ ಜಯಂತಿ ಎಂಬವರು 23ರಂದು ರೇಶನ್ ಖರೀದಿಸುವಾಗ ಪರ್ಸ್ನ ಮೇಜಿನ ಮೇಲೆ ಇರಿಸಿದ್ದರು. ಸ್ವಲ್ಪ ಸಮಯದ ಬಳಿಕ ನೋಡಿದಾಗ ಪರ್ಸ್ ಕಾಣೆಯಾಗಿತ್ತು. ತಕ್ಷಣ ಅಲ್ಲಿದ್ದವರಲ್ಲಿ ವಿಚಾರಿಸಿದರೂ ಪರ್ಸ್ ಪತ್ತೆಯಾಗಲಿಲ್ಲ ಎಂದು ಅವರು ದೂರು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಎಕ್ಸರೇ ಮಾಡುವ ವೇಳೆ ಕುತ್ತಿಗೆಯಲ್ಲಿದ್ದ 3 ಪವನ್ ಚೈನನ್ನು ಪರ್ಸ್ನಲ್ಲಿರಿಸಿದ್ದು, ಪರ್ಸ್ ಚೈನು ಸಮೇತ ಕಾಣೆಯಾಗಿದೆ.