ಇಂದು ಗಣರಾಜ್ಯೋತ್ಸವ

Updated on: 

ಮೂಲ್ಕಿ: ನಗರ ಪಂಚಾಯಿತಿ ವತಿಯಿಂದ 64ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜ.26ರಂದು ಬೆಳಗ್ಗೆ ಮೂಲ್ಕಿ ಕಾರ್ನಾಡಿನ ಗಾಂಧಿ ಮೈದಾನದಲ್ಲಿ ಜರುಗಲಿದ್ದು, ರಾಜ್ಯ ವಿಪಕ್ಷ ಮುಖ್ಯ ಸಚೇತಕ ಕೆ. ಅಭಯಚಂದ್ರ ಜೈನ್ ಧ್ವಜಾರೋಹಣ ಮಾಡಲಿದ್ದಾರೆ. ಮೂಲ್ಕಿ ಪೊಲೀಸ್ ತಂಡ, ಗೃಹರಕ್ಷಕ ದಳ, ವಿಜಯ ಕಾಲೇಜಿನ ಎನ್ಸಿಸಿ, ನೇವಲ್ ವಿಭಾಗ ಹಾಗೂ ವಿವಿಧ ಶಾಲೆಯ ಎನ್ಸಿಸಿ, ಸ್ಕೌಟ್ಸ್, ಗೈಡ್ಸ್ ತಂಡದಿಂದ ಪಥ ಸಂಚಲನ, ಹಿರಿಯ ಪ್ರಾಥಮಿಕ, ಫ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ. ತೋಕೂರಿನ ತಪೋವನದ ಎಂ.ಆರ್. ಪೂಂಜ ಐಟಿಐನ ಎನ್ ಎಸ್ಎಸ್ ಮತ್ತು ರೋವರ್ಸ್ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಸಂಸೆಯಲ್ಲಿ ಜ.26ರ ಬೆಳಗ್ಗೆ 64ನೇ ಗಣರಾಜ್ಯೋತ್ಸವ ಜರಗಲಿದೆ. ಐಕಳ ಪೊಂಪೈ ಕಾಲೇಜಿನ ನಿವೃತ್ತ ಅಧ್ಯಾಪಕ ಶ್ರೀಧರ್ ಡಿ.ಎಸ್. ಧ್ವಜಾರೋಹಣ ಮಾಡಲಿದ್ದಾರೆ. ಐಟಿಐನ ಪ್ರಾಚಾರ್ಯ ವೈಎನ್ ಸಾಲ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಿರೆ ಕೊಪ್ಪಲ ಫ್ರೆಂಡ್ಸ್ ಅಧ್ಯಕ್ಷ ಅಶ್ವಿನಿ ದೇವಾಡಿಗ, ಐಟಿಐನ ರೋವರ್ಸ್ನ ಯೋಜನಾಧಿಕಾರಿ ಸುರೇಶ್, ಎನ್ಎಸ್ಎಸ್ ಯೋಜನಾಧಿಕಾರಿ ರಘುರಾಮ ರಾವ್, ತರಬೇತು ಅಧಿಕಾರಿ ದಯಾನಂದ ಲಾಗ್ವಾಣ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

ಇಂದು ಮಂಗಳೂರಿಗೆ ಸಚಿವ ಸಿ.ಟಿ.ರವಿ
ಮಂಗಳೂರು: ರಾಜ್ಯ ಉನ್ನತ ಶಿಕ್ಷಣ ಸಚಿವ, ದ.ಕ.ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಿ.ಟಿ.ರವಿ 26ರಂದು ಮಂಗಳೂರಲ್ಲಿ ಗಣರಾಜ್ಯೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. 9ಕ್ಕೆ ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡು, 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಿಜಿಆರ್ಎಂಎಸ್ ಪ್ರಾರಂಭೋತ್ಸವದಲ್ಲಿ ಭಾಗವಹಿಸುವರು. 12 ಗಂಟೆಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ವಾರ್ಷಿಕ ಮಹಾಸಭೆ ನಡೆಸುವರು. 2.30ಕ್ಕೆ ಚಿಕ್ಕಮಗಳೂರಿಗೆ ತೆರಳುವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com