ಮಂಗಳೂರು: ಕೊಣಾಜೆ ಸಬ್ ಇನ್ಸ್ಪೆಕ್ಟರ್ ಶಿವಪ್ರಕಾಶ್ ಅವರನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 6ರಂದು ಸೌದಾ ಎಂಬಾಕೆ ಕೊಲೆ ನಡೆಸಿದ ಪ್ರಿಯಕರ ಅಬ್ದುಲ್ ರೆಹಮಾನ್ ಬಳಿಕ ಅಪಘಾತ ಎಂದು ಬಿಂಬಿಸಿದ್ದ. ಇದನ್ನು ಪ್ರಶ್ನಿಸಿ ಪೊಲೀಸ್ ಠಾಣೆಗೆ ತೆರಳಿದ ಪತಿ ಅಬ್ದುಲ್ ರಜಾಕ್ ಮನವಿಯನ್ನು ಎಸ್ಐ ಮಾನ್ಯ ಮಾಡಿರಲಿಲ್ಲ.
ಬಳಿಕ ಪೊಲೀಸ್ ಕಮಿಷನರ್ಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಶಿವಪ್ರಕಾಶ್ ಅವರನ್ನು ಅಮಾನತುಗೊಳಿಸಲಾಗಿದೆ.
ಶಿವಪ್ರಕಾಶ್ ಅವರು, ಉಳ್ಳಾಲದಲ್ಲಿ ಉಗ್ರರ ಸೆರೆ, ಮಹಿಳೆಯರ ಸರಣಿ ಹಂತಕ ಸೈನೆಡ್ ಮೋಹನ ಸೆರೆ ಸಹಿತ ಮಹತ್ವದ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಇದರೊಂದಿಗೆ ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪವೂ ಇತ್ತು.