ಮಂಗಳೂರು: ತೊಕ್ಕೊಟ್ಟು ಬಹಿರಂಗ ಸಭೆಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಉಳ್ಳಾಲ್ ಸ್ವಾಗತಿಸಿದರು. ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಕರ್ಕೆರ ವಂದಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದರು.
ಪೂಜಾರಿ ಮುಂದು: ಪೂಜಾರಿ ದೊಡ್ಡ ಬಾವುಟ ಹಿಡಿದು ಎಲ್ಲರಿಗಿಂತ ಮುಂದೆ ಇದ್ದು, ಎಲ್ಲರನ್ನು ಹುರಿದುಂಬಿಸಿ ಕರೆಯುತ್ತಿದ್ದರು. ಕೆಲವು ಕಡೆ ಕಾರ್ಯಕರ್ತರು ಕುಣಿಯುತ್ತಿದ್ದರು.
ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ, ಜನಾರ್ದನ ಪೂಜಾರಿ, ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ರಮಾನಾಥ ರೈ, ಮಾಜಿ ಸ್ಪೀಕರ್ ಸುದರ್ಶನ್, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ, ಕಾಂಗ್ರೆಸ್ ಅಧ್ಯಕ್ಷ ಮಂಜುಳಾ ನಾಯ್ಡು, ವಿಧಾನ ಪರಿಷತ್ ಪ್ರತಿ ಪಕ್ಷ ನಾಯಕ ಎಸ್.ಆರ್.ಪಾಟೀಲ್, ಇಬ್ರಾಹಿಂ, ಬಿ.ಎಲ್.ಶಂಕರ್ ಪಾದಯಾತ್ರೆ ನಾಯಕತ್ವ ವಹಿಸಿದ್ದರು. ಪಾದಯಾತ್ರೆ ದಾರಿ: ಶಾಸಕ ಯು.ಟಿ.ಖಾದರ್ ಉಳ್ಳಾಲದಲ್ಲಿ ಪಾದಯಾತ್ರೆಗೆ ಒಳ್ಳೆ ಆರಂಭ ನೀಡಿದರು. ಮಧ್ಯಾಹ್ನ 3 ಗಂಟೆಗೆ ತೊಕ್ಕೊಟ್ಟು ಬಹಿರಂಗ ಸಭೆ ಮುಗಿದ ಬಳಿಕ ಯುನಿಟಿ ಹಾಲ್ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. 4.30ರ ವೇಳೆಗೆ ಪಂಪ್ವೆಲ್ ನಲ್ಲಿ ಸಂಜೆ ಜೆ.ಆರ್.ಲೋಬೊ ಪ್ರಾಯೋಜಕತ್ವದ ಚಹಾಕೂಟ ಇತ್ತು. ಅಲ್ಲಿ ಡಾ.ಜಿ.ಪರಮೇಶ್ವರ್ ಮಾತನಾಡಿದರು. ಅಲ್ಲಿಂದ ಕೊಟ್ಟಾರ ಚೌಕಿಯಲ್ಲಿ ಸಂಜೆ 5.30ರಿಂದ ರಾತ್ರಿ 9 ಗಂಟೆ ವರೆಗೆ ಬಹಿರಂಗ ಸಭೆ ನಡೆಯಿತು. ಅಲ್ಲಿಂದ 2 ಕಿ.ಮೀ. ದೂರದ ಕೂಳೂರಲ್ಲಿ ಯಾತ್ರೆ ಸಮಾಪನಗೊಂಡಿತು. ಬುಧವಾರ ಬೆಳಗ್ಗೆ 9 ಗಂಟೆಯಿಂದ ಕೂಳೂರಲ್ಲಿ ಮತ್ತೆ ಪಾದಯಾತ್ರೆ ಆರಂಭವಾಗಲಿದೆ.