ಸರ್ವ ಕಾಲೇಜ್ ಸಂಘ ಅಧ್ಯಕ್ಷ ದೀಕ್ಷಿತ್ ಶೆಟ್ಟಿ
ಮಂಗಳೂರು: ಎನ್‌ಜಿಒ ಹಾಲ್‌ನಲ್ಲಿ ಶನಿವಾರ ನಡೆದ ಸರ್ವಕಾಲೇಜ್ ವಿದ್ಯಾರ್ಥಿ ಸಂಘದ ಚುನಾವಣೆ ಯಲ್ಲಿ ಗೆದ್ದು ಅಧ್ಯಕ್ಷರಾಗಿ ವಿವಿ ಕಾಲೇಜ್‌ನ ದೀಕ್ಷಿತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಾರ್ಯಾಧ್ಯಕ್ಷರಾಗಿ ಕೆನರಾ ಕಾಲೇಜ್‌ನ ಡೊನಾಲ್ಡ್ ನರೋನ್ಹ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀದೇವಿ ಕಾಲೇಜ್‌ನ ಮೆಹರಾಜ್ ಆಲಂ, ಉಪಾಧ್ಯಕ್ಷರಾಗಿ ಪದವು ಕಾಲೇಜ್‌ನ ಪ್ರತೀಕ್ ರೈ, ಪುತ್ತೂರು ಸೇಂಟ್ ಫಿಲೋಮಿನಾ ಕಾಲೇಜ್‌ನ ಲೆಸ್ಲಿ ಲೋಬೊ, ಲಾಲ್‌ಬಾಗ್ ಆದರ್ಶ ಕಾಲೇಜ್‌ನ ಮಿಲನ್ ರೇಮಂಡ್, ಕಾರ್ಯದರ್ಶಿಯಾಗಿ ರಾಮಕೃಷ್ಣ ಕಾಲೇಜ್‌ನ ಸಚಿನ್ ಶೆಟ್ಟಿ, ಸೇಂಟ್ ಅಲೋಶಿಯಸ್ ಕಾಲೇಜ್ ಹೆರಾಲ್ಡ್ ಲೇನಿಯಲ್ ಡಿಸೋಜ, ಕುದ್ರೋಳಿ ಮಹೇಶ್ ಕಾಲೇಜ್‌ನ ಮುಹಮ್ಮದ್ ಅರ್ಷದ್, ಕೋಶಾಧಿಕಾರಿಯಾಗಿ ವಿವಿ ಕಾಲೇಜ್‌ನ ಚೇತನ್ ಡಿ.ಅಡ್ಯಾರ್ ಆಯ್ಕೆಯಾಗಿದ್ದಾರೆ.
ಸಂಘಟನೆ ಕಾರ್ಯದರ್ಶಿ -ಸಂದೀಪ್ ಪ್ರಭು, ಅಲೋಶಿಯಸ್ ಸಿ.ಕೆ, ಕ್ರೀಡಾ ಕಾರ್ಯದರ್ಶಿ- ಧರ್ಮ, ಹಸನ್ ಅರಾಫತ್, ಜತೆ ಕಾರ್ಯದರ್ಶಿ -ಪ್ರತೀಕ್ಷ, ನಿಶಾ, ಸಾಂಸ್ಕೃತಿಕ ಕಾರ್ಯರ್ಶಿ- ರಾಕೇಶ್, ಪ್ರಮೋದ್, ಸಂಚಾಲಕ- ಲೋಹಿತ್ ಕುಮಾರ್, ಸಹ ಸಂಚಾಲಕ- ಸ್ವಾನ್ ಡಿಸೋಜ, ದಕ್ಷ ಗೌಡ, ಮಂಗಳೂರು ತಾಲೂಕು ಅಧ್ಯಕ್ಷ -ಅಜಯ ಮಾಡ, ಪುತ್ತೂರು ತಾಲೂಕು ಅಧ್ಯಕ್ಷ- ಜೋಯಲ್ ಪ್ರದೀಪ್ ಡಿಸೋಜ, ಸುಳ್ಯ ತಾಲೂಕು ಅಧ್ಯಕ್ಷ -ಮಹಮ್ಮದ್ ಸರ್ಫಾನ್, ಮೂಡುಬಿದರೆ ಅಧ್ಯಕ್ಷ -ಉಮೇಶ್ ಆಚಾರ್ಯ, ಬೆಳ್ತಂಗಡಿತಾಲೂಕು ಅಧ್ಯಕ್ಷ -ಸಂಚಿತ್, ಬಂಟ್ವಾಳ ತಾಲೂಕು ಅಧ್ಯಕ್ಷ-ಸುರೇಶ್ ಬಿ.ಸಿ.ರೋಡ್ ಆಯ್ಕೆಯಾದರು.
ಮಂಗಳೂರು ವಿವಿ ಉಪ ಕುಲಪತಿ ಪ್ರಭಾಕರ ನೀರುಮಾರ್ಗ ಇದ್ದರು.
ಶಾಸಕ ಜೆ.ಆರ್.ಲೋಬೊ, ಮೇಯರ್ ಮಹಾಬಲ ಮಾರ್ಲ, ಸಂಘದ ಮಾಜಿ ಅಧ್ಯಕ್ಷ ವಿಶ್ವಾಸ್‌ದಾಸ್, ಹರೀಶ್ ಆಚಾರ್ಯ, ಚುನಾವಣೆ ಅಧಿಕಾರಿ ದಿನಕರ ಶೆಟ್ಟಿ ಇದ್ದರು. ಲೋಹಿತ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ