ಸುಳ್ಯ ಸಿಐ ಪರ ಪ್ರತಿಭಟನೆ

Updated on: 

ಸುಳ್ಯ: ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ವಿರುದ್ಧ ದುರ್ನಡತೆ ಆರೋಪ ಹೊರಿಸಿ ಕೆಲವರು ನಡೆಸುತ್ತಿರುವ ಹೋರಾಟ ಸತ್ಯಕ್ಕೆ ದೂರವಾಗಿದ್ದು, ಇಂತಹ ಆರೋಪ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದವು. ಸುಳ್ಯದ ಅಟೋ ರಿಕ್ಷಾ ಚಾಲಕ- ಮಾಲೀಕರ ಸಂಘ, ಲಾರಿ ಮಾಲೀಕ- ಚಾಲಕರ ಸಂಘ, ದಲಿತ ಸೇವಾ ಸಮಿತಿ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಸತೀಶ್ ಅವರನ್ನು ವರ್ಗಾಯಿಸಿದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು. ಬಿಜೆಪಿ ನಾಯಕ ಪಿ.ಕೆ.ಉಮೇಶ್, ಕಾಂಗ್ರೆಸ್ ನಾಯಕ ಮಹಮ್ಮದ್ ಕುಂಞ ಗೂನಡ್ಕ, ರಿಕ್ಷಾ ಯೂನಿಯನ್ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ, ಲಾರಿ ಯೂನಿಯನ್ ಅಧ್ಯಕ್ಷ ದಿನೇಶ್ ಅಡ್ಕಾರ್, ದಲಿತ ಮಹಿಳಾ ವೇದಿಕೆ ಸಂಚಾಲಕಿ ಸರಸ್ವತಿ ಬೊಳಿಯಮಜಲು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com