ಮಂಗಳೂರು: ಉರ್ವ ಗ್ಲೋಬಲ್ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ವತಿಯಿಂದ ಜು. 25 ರಂದು ಆಸ್ಪತ್ರೆಯಲ್ಲಿ ಮುಸ್ಲಿಂ ಬಾಂಧವರಿಗೆ ಇಫ್ತಾರ್ ಕೂಟ ಆಯೋಜಿಸಲಾಗಿದೆ. ಸಂಜೆ 5.30 ಗಂಟೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಭಾಗವಹಿಸಿ, ಶುಭ ಹಾರೈಸುವರು ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಬಿ.ಎಸ್. ರೈ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಶಝಾನ್ ಮಾಸಾಚರಣೆ ಸಂದರ್ಭದಲ್ಲಿ ಈ ಇಫ್ತಾರ್ ಕೂಟ ನಡೆಯಲಿದ್ದು, ಗೋಲ್ಡ್ ಹೌಸ್ ಮಂಗಳೂರು ಸಹಯೋಗವಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಇದ್ದರು.