ಕಾರ್ಗಿಲ್ ದಿನಾಚರಣೆ

Updated on: 

ಉಪ್ಪಿನಂಗಡಿ: ರಾಷ್ಟ್ರದ ರಕ್ಷಣೆ ವಿಚಾರದಲ್ಲಿ ಮೈ ಮರೆವು ಸಲ್ಲದು. ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಪಾಕಿಸ್ತಾನ 19 ಬಾರಿ ಕದನ ವಿರಾಮ ಉಲ್ಲಂಘಿಸಿದೆ. ಇದರ ಅರ್ಥ ಯುದ್ಧದ ವ್ಯಾಮೋಹ ಪಾಕಿಗಿನ್ನೂ ಮುಗಿದಿಲ್ಲ. ಹಾಗಾಗಿ ನಿರ್ಣಯ ಹಾಗೂ ಘೋರ ಕದನ ಸನ್ನಿಹಿತವಾಗಿದೆ. ರಾಷ್ಟ್ರ ಕಾರ್ಯದ ಕರೆಗೆ ಯುವ ಶಕ್ತಿ ಎಂದಿಗೂ ಹಿಂದೇಟು ಹಾಕಬಾರದೆಂದು ಉಪ್ಪಿನಂಗಡಿ ಶ್ರೀ ರಾಮ ಪ್ರಾಥಮಿಕ ಶಾಲಾ ಸಂಚಾಲಕ ಯು.ಜಿ. ರಾಧ ಕರೆ ನೀಡಿದರು. ಅವರು ಶನಿವಾರದಂದು ಉಪ್ಪಿನಂಗಡಿ ಸಂಗಮ ಕೃಪಾ ಸಭಾ ಭವನದಲ್ಲಿ ಉಪ್ಪಿನಂಗಡಿ ಎಬಿವಿಪಿ ಘಟಕದ ಆಶ್ರಯದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೇಶವ ಗೌಡ  ಮಾತನಾಡಿದರು.  ಎಬಿವಿಪಿ ತಾಲೂಕು ಸಂಚಾಲಕ ಶ್ಯಾಮ್ ಸುದರ್ಶನ್ ಭಟ್, ಕಾಲೇಜು ಎಬಿವಿಪಿ ಘಟಕದ ಮುಂದಾಳುಗಳಾದ ನಿತೇಶ್ ಶೆಟ್ಟಿ ಮತ್ತು ಜಯಲಕ್ಷ್ಮೀ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪಿ. ಸ್ವಾಗತಿಸಿದರು. ಜಯಲಕ್ಷ್ಮೀ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com