ಲೆಕ್ಕಾಧಿಕಾರಿ ವಿರುದ್ಧ ವಂಚನೆ ಆರೋಪ

Updated on: 


ಚನ್ನಗಿರಿ: ತಾಲೂಕಿನ ದೇವರಹಳ್ಳಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಗಂಗಾಧರಪ್ಪ ಎಂಬಾತ ತಾಲೂಕು ಕಚೇರಿಯಿಂದ ಆಗುವ ಸಣ್ಣ ಪುಟ್ಟ ಕೆಲಸಗಳಿಗೆ ಬಡವರಿಂದ ಹಣ ಪಡೆದು ವಂಚಿಸುತ್ತಿದ್ದಾನೆ ಎಂದು ಡಿಎಸ್‌ಎಸ್ ಸಂಚಾಲಕ ಎ.ಕೆ. ರುದ್ರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.  ಈ ವ್ಯಾಪ್ತಿಯಲ್ಲಿನ ಜನರಿಗೆ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಸೌಲಭ್ಯ ಪಡೆಯುವವರಿಂದ, ಖಾತೆ ಬದಲಾವಣೆ ಈಗೆ ಇವರಿಂದ ಆಗುವ ಎಲ್ಲಾ ಕೆಲಸಗಳಿಗೂ ಲಂಚ ಪಡೆಯುತ್ತಿದ್ದು ಬಡವರು ತುಂಬಾ ಬೇಸತ್ತಿದ್ದಾರೆ ಎಂದು ಆರೋಪಿಸಿದ್ದಾರೆ.




ಜಿಪಂ ಸದಸ್ಯ, ಶಾಸಕರ ಜುಗಲ್ ಬಂದಿ
ಹರಪನಹಳ್ಳಿ: ತಾಲೂಕಿನ ತೆಲಿಗಿ ಗ್ರಾಮದಲ್ಲಿ ನಡೆದ ಬಸ್ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಬಸ್ ನಿಲ್ದಾಣಕ್ಕೆ ನಿವೇಶನ ಯಾರ ಪ್ರಯತ್ನದಿಂದ ದೊರಕಿತು ಎಂಬ ಬಗ್ಗೆ ಕಾಂಗ್ರೆಸ್‌ನ ಜಿಪಂ ಸದಸ್ಯ ಆರ್. ಈಶ್ವರಪ್ಪ ಹಾಗೂ ಶಾಸಕ ಜಿ. ಕರುಣಾಕರ ರೆಡ್ಡಿ ಮಧ್ಯೆ ವಿಭಿನ್ನ ಹೇಳಿಕೆಯ ಏಟು -ಏದಿರೇಟು ಶುಕ್ರವಾರ ನಡೆಯಿತು.   ಮೊದಲಿಗೆ ಮಾತನಾಡಿದ ಜಿಪಂ ಸದಸ್ಯ ಈಶ್ವರಪ್ಪ ಅವರು ತೆಲಿಗಿ ಗ್ರಾಮದ ಬಸ್ ಡಿಪೋ ನಿರ್ಮಿಸಲು ಎಂ.ಪಿ. ಪ್ರಕಾಶ್ ಅವರ ಪಾತ್ರ ಹಿರಿದಾಗಿದೆ. ಹಿಂದೆ ಅವರು ಗೃಹ ಸಚಿವರಾಗಿದ್ದಾಗ ಈ ಸ್ಥಳಲ್ಲಿದ್ದ ನಿರುಪಯುಕ್ತವಾಗಿದ್ದ ಇಲ್ಲಿಯ ಪೊಲೀಸ್ ಕ್ವಾಟ್ರಸ್‌ಗಳನ್ನು ನೆಲಸಮ ಮಾಡಿ ಬಸ್ ನಿಲ್ದಾಣ ನಿರ್ಮಿಸುವಂತೆ ಜಾಗ ಒದಗಿಸಿಕೊಟ್ಟಿದ್ದರು ಎಂದು ನೆನಪಿಸಿದರು. ನಂತರ ಅದ್ಯಕ್ಷತೆ ವಹಿಸಿದ್ದ  ಶಾಸಕ ಜಿ. ಕರುಣಾಕರ ರೆಡ್ಡಿ 2008 ರ ಚುನಾವಣೆಯಲ್ಲಿ ಆ  ಮಹಾನುಭವರ( ದಿ. ಎಂ. ಪಿ ಪ್ರಕಾಶ್)  ವಿರುದ್ಧ ಗೆಲವು ಪಡೆದ ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಅಂದಿನ ಗೃಹ ಸಚಿವ ದಿ. ವಿ.ಎಸ್. ಆಚಾರ್ಯ ಅವರು ಸಂಪೂರ್ಣ ದಾಖಲೆಗಳು ಕೆಎಸ್‌ಆರ್‌ಟಿಸಿಗೆ ವರ್ಗಾವಣೆಯಾಗುವಂತೆ ಮಾಡಿದರು. ನಂತರ ರು. 80 ಲಕ್ಷ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲಾಗಿದೆ ಎಂದು ತಿರುಗೇಟು ನೀಡಿದರು.
ಶಾಲೆ ಸ್ಥಾಪನೆಗೆ ಅರ್ಜಿಗಳ ಆಹ್ವಾನ
ರಾಷ್ಟ್ರೀಯ ಹಾಗೂ ರಾಜ್ಯ ಬಾಲ ಕಾರ್ಮಿಕ ಯೋಜನೆಯಡಿ ದಾವಣಗೆರೆ ತಾಲೂಕಿನಲ್ಲಿ ಒಂದು ಬಾಲ ಕಾರ್ಮಿಕ ವಿಶೇಷ ಪುನರ್ವಸತಿ ಶಾಲೆ ಸ್ಥಾಪಿಸಲು ಸಂಘ- ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಸಂಘ- ಸಂಸ್ಥೆಗಳ ನೋಂದಣಿ ಕಾಯ್ದೆಯಡಿ ನೋಂದಣಿಯಾಗಿ 3 ವರ್ಷಗಳಾದ ಹಾಗೂ ಪ್ರತಿ ವರ್ಷ ನವೀಕರಿಸಿರುವ ಸಂಸ್ಥೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಸ್ಥೆ, ನಂ.42, ಡಿಸಿ ಕಚೇರಿ ಭವನ, ಕರೂರು ಕ್ರಾಸ್, ದಾವಣಗೆರೆಗೆ ಸಂಪರ್ಕಿಸಬೇಕು. ಫೆ.25ರ ಸಂಜೆ 5ರ ಒಳಗಾಗಿ ಅರ್ಜಿ ಸಲ್ಲಿಸಲು ಪ್ರಕಟಣೆ ಸೂಚಿಸಿದೆ.
ಜಿಲ್ಲಾಡಳಿತ ಸನ್ಮಾನ
ಕಳೆದ 3 ದಶಕಗಳಿಂದಲೂ ಸಾಮಾನ್ಯ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಹಂತ ಹಂತವಾಗಿ ಬೆಳೆದ ಸೀನಿಯರ್ ಫ್ಲಟೂನ್ ಕಮಾಂಡರ್ ಆದ ಕೆ. ರಾಮಣ್ಣನವರ ಸಮಾಜಮುಖಿ ಸೇವೆಗೆ ರಾಷ್ಟ್ರಪತಿ ಪದಕ ಪುರಸ್ಕೃತರಾದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಚಿವ ಎಸ್.ಎ. ರವೀಂದ್ರನಾಥ್ ಹೋಂ ಗಾರ್ಡ್ಸ್‌ನ ರಾಮಣ್ಣಗೆ ಸನ್ಮಾನಿಸಿದರು. ಜಿಪಂ ಅಧ್ಯಕ್ಷೆ ಶೀಲಾ ಗದ್ದಿಗೇಶ್, ಮೇಯರ್ ಸುಧಾ ಜಯರುದ್ರೇಶ, ಜಿಲ್ಲಾಧಿಕಾರಿ ಎಸ್ಸೆಸ್ ಪಟ್ಟಣಶೆಟ್ಟಿ, ಜಿಪಂ ಸಿಇಓ ಎ.ಬಿ. ಹೇಮಚಂದ್ರ, ಎಸ್ಪಿ ಲಾಭೂರಾಮ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com