ಚನ್ನಗಿರಿ: ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಎಂಇಎಸ್ ಯೋಜನೆಯಲ್ಲಿ ಅಲ್ಪಾವಧಿಯ ವೃತ್ತಿ ತರಬೇತಿಗಳಾದ ಬೇಸಿಕ್ ಕಂಪ್ಯೂಟರ್, ಬೇಸಿಕ್ ಛಾಬ್ರಿಕೇಷನ್ ಮತ್ತು ಬೇಸಿಕ್ ಎಲೆಕ್ಟ್ರಿಕಲ್ ತರಬೇತಿ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಚ್.ಕೆ. ನಾಗರಾಜ್ ತಿಳಿಸಿದ್ದಾರೆ.
ಈ ಯೋಜನೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಎನ್.ಸಿ.ವಿ.ಟಿ.ಯಂದ ಎಂಇಎಸ್ ರಾಷ್ಟ್ರೀಯ ಪ್ರಮಾಣ ಪತ್ರ ನೀಡಲಾಗುವುದು ಎಂದು ತಿಳಿಸಿದ್ದು, ಈ ಪ್ರಮಾಣ ಪತ್ರಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಇರುವುದಾಗಿ ತಿಳಿಸಿದ್ದಾರೆ.