ದಾವಣಗೆರೆ: 11 ಕೆ.ವಿ. ಎಸ್ವಿಟಿ ವಿದ್ಯುತ್ ಮಾರ್ಗದ ಮೇಲೆ ತುರ್ತು ಕಾರ್ಯವನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ ಫೀಡರ್ ವ್ಯಾಪ್ತಿಯಲ್ಲಿ ಫೆ.6ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಗರದ ಎಂಸಿ ಕಾಲನಿ ಬಿ ಬ್ಲಾಕ್, ಕಾಲನಿಯ ಮಹಾನಗರ ಪಾಲಿಕೆ ಈಜುಕೊಳದ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು, ಗ್ರಾಹಕರು ಸಹಕರಿಸುವಂತೆ ಬೆಸ್ಕಾಂ ನಗರ ಉಪ ವಿಭಾಗ- 1ರ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಕೆ.ಸಿ. ಕುಮಾರಸ್ವಾಮಿ ಕೋರಿದ್ದಾರೆ.
ಎಸ್ಡಿಎ ಹುದ್ದೆಗೆ ತರಬೇತಿ ಶಿಬಿರ
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಎಸ್ಡಿಎ) ಹುದ್ದೆನೇಮಕಾತಿ ಪರೀಕ್ಷೆಗೆ ಫೆ.6ರಿಂದ 10 ದಿನಗಳ ಉಚಿತ ಶಿಬಿರವನ್ನು ದಾವಣಗೆರೆ ಬಡಾವಣೆ ಠಾಣೆ ಎದುರಿನ ಮಹಾತ್ಮ ವಿದ್ಯಾಶಾಲೆಯಲ್ಲಿ ಸ್ಪರ್ಧಾ ಭಾರತಿ ಅಧ್ಯಯನ ಕೇಂದ್ರ ಏರ್ಪಡಿಸಿದೆ. ಬೋಧಕ ಕೊಟ್ರೇಶ ಗ್ರಾಪಂ ಕಾಯ್ದೆ ಬಗ್ಗೆ ಉಪನ್ಯಾಸ ನೀಡುವರು. ಮಾಹಿತಿಗೆ ಮೊ- 99618- 83943, 97315- 15559ಗೆ ಸಂಪರ್ಕಿಸಿ.
ಇಂದು ನಿವೃತ್ತ ನೌಕರರ ಸಭೆ
ಜಗಳೂರು ತಾಲೂಕಿನಲ್ಲಿ 1977ರಿಂದ 2012ರ ಅವಧಿಯಲ್ಲಿ ನಿವೃತ್ತರಾದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುವ ವಿಚಾರವಾಗಿ ಫೆ.6ರಂದು ಜಗಳೂರು ಪಟ್ಟಣದ ಬಾಲಕಿಯರ ಪ್ರಾಥಮಿಕ ಶಾಲೆ(ಹಳೆಯ ಬಿ.ಇ.ಓ. ಕಚೇರಿ)ಯಲ್ಲಿ ನಿವೃತ್ತ ನೌಕರರ ಸಂಘದ ಸಭೆ ನಡೆಯಲಿದೆ.