ಮೃತ ಕುಟುಂಬಕ್ಕೆ 3.5 ಲಕ್ಷ ಪರಿಹಾರ

Updated on: 

ದಾವಣಗೆರೆ: ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದ ಬಳಿ ಬೊಮ್ಮೇನಹಳ್ಳಿ ಗ್ರಾಮದ ಅಂಜಿನಪ್ಪ ಮೈನ್ಸ್ ಲಾರಿ ಅಪ್ಪಳಿಸಿದ ಪರಿಣಾಮ ಸಾವನ್ನಪ್ಪಿದ್ದರಿಂದ ಮೃತನ ಕುಟುಂಬಕ್ಕೆ ಮಾನವೀಯ ದೃಷ್ಟಿಯಿಂದ 3.5 ಲಕ್ಷ ಪರಿಹಾರವನ್ನು ಸಂಸದ ಜಿ.ಎಂ. ಸಿದ್ದೇಶ್ವರ್ ಕೊಡಿಸಿದ್ದಾರೆ.
ಭೀಮಸಮುದ್ರದಲ್ಲಿ ಮೃತನ ಕುಟುಂಬಕ್ಕೆ ಪರಿಹಾರ ಕೊಡಿಸಿದ ನಂತರ ಮಾತನಾಡಿದ ಸಂಸದ ಸಿದ್ದೇಶ್ವರ್, ಈ ಭಾಗದಲ್ಲಿ ಮೈನ್ಸ್ ಲಾರಿಗಳ ಮಿತಿ ಮೀರಿದ ವೇಗ ಮತ್ತು ಅಕ್ರಮ ಗಣಿಗಾರಿಕೆ ಬಗ್ಗೆ ಹಲವಾರು ಬಾರಿ ಕೇಂದ್ರ ಸರ್ಕಾರ, ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಗಮನಕ್ಕೆ ತಂದರೂ ಸ್ಪಂದಿಸಿರಲಿಲ್ಲ. ಈ ಬಗ್ಗೆ ಹಲವಾರು ಪತ್ರ ಬರೆದರೂ ಕೇಂದ್ರ ಗಣಿ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದ್ ಅಸಮಾಧಾನ ವ್ಯಕ್ತಪಡಿಸಿದರು.
ಮಾನವೀಯತೆ ದೃಷ್ಟಿಯಿಂದ ಬಿ.ಬಿ.ಎಚ್. ಮೈನ್ಸ್ ಮಾಲೀಕರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಕೊಡಿಸಿದರು.
ಮೃತನ ಪತ್ನಿ ಜಾನಕಮ್ಮ ಹೆಸರಿಗೆ 2.5 ಲಕ್ಷದ ಚೆಕ್ ಹಾಗೂ ಆತನ ತಂದೆ ಜೂಲ್ ಹನುಮಂತಪ್ಪನ ಹೆಸರಿನಲ್ಲಿ 1 ಲಕ್ಷ ಮೌಲ್ಯದ ಪರಿಹಾರದ ಚೆಕ್ಕನ್ನು ಸಿದ್ದೇಶ್ವರ್ ವಿತರಿಸಿದರು.
ಚೆಕ್ ವಿತರಣೆ ಸಂದರ್ಭದಲ್ಲಿ ಗಾಯತ್ರಿ ಸಿದ್ದೇಶ್ವರ, ಜಿ.ಎಸ್. ಅನಿತಕುಮಾರ, ಬಿಬಿಎಚ್ ಮೈನ್ಸ್‌ನ ಪಾಂಡು, ರಾಮಚಂದ್ರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ. ಸಿದ್ದಪ್ಪ, ಎಪಿಎಂಸಿ ನಿರ್ದೇಶಕ ಬೊಮ್ಮೇನಹಳ್ಳಿ ಸಿದ್ದಣ್ಣ, ಮಾಜಿ ಅಧ್ಯಕ್ಷ ಗುರುಮೂರ್ತಿ, ಆನಂದಪ್ಪ, ಪಾಲಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com