ದಾವಣಗೆರೆ: ದಾವಣಗೆರೆಯ ನೂತನ ತಹಸೀಲ್ದಾರ್ ಆಗಿ ಆರ್. ಮಂಜುನಾಥ ಬಳ್ಳಾರಿ ಅಧಿಕಾರ ವಹಿಸಿಕೊಂಡಿದ್ದಾರೆ.
ಈವರೆಗೆ ತಹಸೀಲ್ದಾರರಾಗಿದ್ದ ಡಾ. ಬಿ.ಆರ್. ಹರೀಶ್ ರಾಮನಗರ ಜಿಲ್ಲೆ ಮಾಗಡಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಆರ್. ಮಂಜುನಾಥ ಬಳ್ಳಾರಿಗೆ ನೇಮಕ ಮಾಡಿ, ಸರ್ಕಾರ ಆದೇಶ ಹೊರಡಿಸಿತ್ತು. ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ನೂತನ ತಹಸೀಲ್ದಾರರಾಗಿ ಮಂಜುನಾಥ ಬಳ್ಳಾರಿ ಅಧಿಕಾರ ವಹಿಸಿಕೊಂಡರು. ಮೂಲತಃ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಮಂಜುನಾಥ ಯಲ್ಲಾಪುರ, ಮುಂಡಗೋಡ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನೂತನ ತಹಸೀಲ್ದಾರ್ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕಚೇರಿ ಶಿರಸ್ತೇದಾರರು, ಸಿಬ್ಬಂದಿ ಶುಭ ಹಾರೈಸಿದರು.