ಚನ್ನಗಿರಿ ಪಪಂ ಮೀಸಲು ಪ್ರಕಟ

Updated on: 

ಚನ್ನಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ನಿರ್ಧರಿಸಿದ್ದು 2007ರಲ್ಲಿ ನಿಗಧಿ ಪಡಿಸಿದ ಮೀಸಲಾತಿ ಪಟ್ಟಿಯಂತೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದು ಅಂತಿಮವಾದ ಮೀಸಲಾತಿ ಪಟ್ಟಿಯನ್ನು ಯಾವುದೇ ಬದಲಾವಣೆಯನ್ನು ಮಾಡದೆ ಅಳವಡಿಸಿಕೊಂಡು ಚುನಾವಣೆ ನಡೆಸಲು ಪಟ್ಟಣದ 19 ವಾರ್ಡ್‌ಗಳ ವಾರ್ಡ್‌ವಾರು ಮೀಸಲಾತಿ ಪಟ್ಟಿ ಈ ರೀತಿ ಇದೆ.
ಒಂದನೇ ವಾರ್ಡ್ ಆಶ್ರಯ ಬಡಾವಣೆಗೆ ಮೀಸಲಾತಿಯು ಸಾಮಾನ್ಯ, 2ನೇ ವಾರ್ಡ್‌ನ ಅಂತರಘಟ್ಟೆಮ್ಮ ದೇವಸ್ಥಾನ ಹಿಂದುಳಿದ ವರ್ಗ (ಎ), 3ನೇ ವಾರ್ಡ್‌ನ ಟಿಪ್ಪು ನಗರ ಹಿಂದುಳಿದ ವರ್ಗ-ಎ (ಮಹಿಳೆ), 4ನೇ ವಾರ್ಡ್ ದುರ್ಗಮ್ಮನ ದೇವಸ್ಥಾನ ಸಾಮಾನ್ಯ, 5ನೇ ವಾರ್ಡ್ ನೂರಾನಿ ಮಸೀದಿ ಸಾಮಾನ್ಯ, 6ನೇ ವಾರ್ಡ್ ಎ.ಕೆ.ಕಾಲೋನಿ ಪರಿಶಿಷ್‌ಠ ಜಾತಿ, 7ನೇ ವಾರ್ಡ್ ಸರ್ಕಾರಿ ನೌಕರರ ಕಾಲೋನಿ ಸಾಮಾನ್ಯ, 8ನೇ ವಾರ್ಡ್ ಸೈದರ್ ಕೇರಿ ಸಾಮಾನ್ಯ (ಮಹಿಳೆ), 9ನೇ ವಾರ್ಡ್ ಕೌಸರ್ ಮಸೀದಿ ಹಿಂದುಳಿದ ವರ್ಗ-ಬಿ (ಮಹಿಳೆ), 10ನೇ ವಾರ್ಡ್ ಲಷ್ಕರ್ ಮೊಹಲ್ಲಾ ಹಿಂದುಳಿದ ವರ್ಗ-ಎ(ಮಹಿಳೆ), 11ನೇ ವಾರ್ಡ್ ಸಿಹಿ ನೀರು ಬಾವಿ ರಸ್ತೆ ಹಿಂದುಳಿದ ವರ್ಗ -ಎ, 12ನೇ ವಾರ್ಡ್ ಗೌರಮ್ಮನ ದೇವಸ್ಥಾನ ಸಾಮಾನ್ಯ (ಮಹಿಳೆ), 13ನೇ ವಾರ್ಡ್ ಖಾಜಿ ಮೊಹಲ್ಲಾ ಸಾಮಾನ್ಯ(ಮಹಿಳೆ), 14ನೇ ವಾರ್ಡ್ ನಾಡಿಗರ ಬೀದಿ ಸಾಮಾನ್ಯ, 15ನೇ ವಾರ್ಡ್ ನಾಯಕರ ಬೀದಿ ಪರಿಶಿಷ್ಠ ಜಾತಿ (ಮಹಿಳೆ), 16ನೇ ವಾರ್ಡ್ ರಾಘವೇಂದ್ರ ನಗರ ಸಾಮಾನ್ಯ, 17ನೇ ವಾರ್ಡ್ ಬೀರಲಿಂಗೇಶ್ವರ ದೇವಸ್ಥಾನ ಸಾಮಾನ್ಯ, 18ನೇ ವಾರ್ಡ್ ಕುಕ್ಕುವಾಡದಮ್ಮನ ದೇವಸ್ಥಾನ ಹಿಂದುಳಿದ ವರ್ಗ-ಎ, 19ನೇ ವಾರ್ಡ್ ಕಣದಸಾಲು ಬಡಾವಣೆ ಪರಿಶಿಷ್ಠ ಪಂಗಡ (ಮಹಿಳೆ) ಈ ರೀತಿಯಾಗಿ ಮೀಸಲಾತಿ ಪಟ್ಟಿಯು ಪ್ರಕಟಗೊಂಡಿದೆ.
ಈಗಾಗಲೇ ಅಸ್ಥಿತ್ವದಲ್ಲಿರುವ ಪ.ಪಂ.ನ ಚುನಾಯಿತ ಸದಸ್ಯರ ಅಧಿಕಾರದ ಅವಧಿಯು ಇದೇ ಫೆಬ್ರವರಿ 18ರಂದು ಮುಕ್ತಾಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com