ಇಂದಿನಿಂದ ಸಾಚಾರ್ ವರದಿ ಜನಾರಿವು

Updated on: 

ದಾವಣಗೆರೆ: ಪರಿಶಿಷ್ಟರಿಗಿಂತಲೂ ಕೆಳ ಮಟ್ಟದಲ್ಲಿರುವ ಮುಸ್ಲಿಂ ಸಮಾಜವನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಮುಖ್ಯ ವಾಹಿನಿಗೆ ತರಲು ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ಸಮಿತಿ ಮಾಡಿರುವ ಶಿಫಾರಸ್ಸುಗಳ ಅನುಷ್ಟಾನಕ್ಕೆ ಒತ್ತಾಯಿಸಿ, ವರದಿ ಬಗ್ಗೆ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಸಾಚಾರ್ ವರದಿ ಅನುಷ್ಟಾನ ಹೋರಾಟ ಸಮಿತಿ ಫೆ.8ರಿಂದ ರಾಜ್ಯಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಮಿತಿಯ ಸಂಚಾಲಕ, ಹಿರಿಯ ವಕೀಲ ಅನೀಸ್ ಪಾಷಾ, ಫೆ.8ರಂದು ದಾವಣಗೆರೆಯಲ್ಲಿ ನ್ಯಾ. ಸಾಚಾರ್ ವರದಿ ಕುರಿತಂತೆ ಮುಸ್ಲಿಂ ಸಮಾಜ ಬಾಂಧವರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಂತರದಲ್ಲಿ ರಾಜ್ಯಾದ್ಯಂತ ಎಲ್ಲಾ ಭಾಗದಲ್ಲೂ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಹೊಂದಿದ್ದೇವೆ ಎಂದರು.
  ಆದರೆ, ಸಮಾಜದಲ್ಲಿ ವಿದ್ಯಾವಂತರು ಒಬ್ಬರು, ಇಬ್ಬರು ಮಕ್ಕಳನ್ನು ಹೊಂದಿರುವ ಅನೇಕ ನಿದರ್ಶನಗಳಿವೆ. ಮಿತ ಸಂತಾನದ ಮಹತ್ವ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದು ಅವರು ಹೇಳಿದರು.
 ಸಮಿತಿ ಸಂಚಾಲಕ ಜಮೀಲ್ ಅಹ್ಮದ್, ಸೈಯದ್ ಇಸ್ಮಾಯಿಲ್, ಸತೀಶ ಅರವಿಂದ, ಸೈಯದ್ ಇರ್ಫಾನ್, ಸಲೀಂ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com