ಚನ್ನಗಿರಿ: ವೈದ್ಯಕೀಯ ಶಿಕ್ಷಣ ಇಲಾಖೆಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗಳನ್ನು ವಹಿಸುತ್ತಿರುವ ಮತ್ತು ವೇತನದ ಅನುದಾನವನ್ನು ಸರ್ಕಾರದಿಂದಲೇ ನೇರವಾಗಿ ಆಸ್ಪತ್ರೆಗಳಿಗೆ ನೀಡುವಂತೆ ಒತ್ತಾಯಿಸಿ ತಾಲೂಕಿನ ಎಲ್ಲಾ ಆರೋಗ್ಯ ಕೇಂದ್ರಗಳ ಮತ್ತು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ದಾದಿಯರು ಹಾಗು ಗ್ರೂಪ್ ಡಿ ನೌಕರರು ಶುಕ್ರವಾರದಿಂದ ತಮ್ಮ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಿದ್ದಾರೆ. ಈ ಮುಷ್ಕರದಿಂದ ಆಸ್ಪತ್ರೆಯಲ್ಲಿ ದೊರೆಯಬಹುದಾದ ಚಿಕಿತ್ಸೆಯಿಂದ ರೋಗಿಗಳು ವಂಚಿತರಾಗಿದ್ದಾರೆ.