ನೇಮಕ

Updated on: 

ದಾವಣಗೆರೆ: ಜೆಡಿಎಸ್ ಪಕ್ಷದ ದಾವಣಗೆರೆ ಜಿಲ್ಲಾ ಅಲ್ಪಸಂಖ್ಯಾತರ ಯುವಘಟಕದ ಅಧ್ಯಕ್ಷರಾಗಿ ಯು.ಎಂ. ಮನ್ಸೂರ್ ಅಲಿ ನೇಮಕಗೊಂಡಿದ್ದಾರೆ. ಪಕ್ಷದಲ್ಲಿ ಅನೇಕ ವರ್ಷಗಳಿಂದಲೂ ಸೇವೆ ಸಲ್ಲಿಸಿಕೊಂಡು ಬಂದ ಮನ್ಸೂರ್ ಅಲಿ ಸೇವೆ ಗುರುತಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಅಲ್ಪಸಂಖ್ಯಾತರ ಯುವ ಘಟಕಕ್ಕೆ ಅಧ್ಯಕ್ಷರಾಗಿ ನೇಮಿಸಿ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಚ್. ಷಫೀ ಅಹ್ಮದ್ ಆದೇಶ ಹೊರಡಿಸಿದ್ದಾರೆ. ಪಕ್ಷದ ತತ್ವ, ಸಿದ್ಧಾಂತಕ್ಕೆ ಬದ್ಧರಾಗಿ ಅಲ್ಪಸಂಖ್ಯಾತರ ಬಲವರ್ಧನೆಗೆ ಶ್ರಮಿಸುವಂತೆ ಸೂಚಿಸಿ ನೇಮಕ ಮಾಡಲಾಗಿದೆ ಎಂದು ಪಕ್ಷ ತಿಳಿಸಿದೆ.
ಸಹಾಯವಾಣಿ ಸ್ಥಾಪನೆ
ಹಿರಿಯ ನಾಗರಿಕರ ಗುರುತಿನ ಚೀಟಿ ವಿತರಣೆ, ವೃದ್ಧಾಶ್ರಮಗಳ ಬಗ್ಗೆ ಮಾಹಿತಿ, ಕೌಟುಂಬಿಕ ತೊಂದರೆ, ವ್ಯಾಜ್ಯಗಳ ಬಗ್ಗೆ ಸಲಹೆ, ನಿರ್ವಹಣೆ, ಕೋರ್ಟ್ ವ್ಯಾಜ್ಯ ಬಗ್ಗೆ ಉಚಿತ ಕಾನೂನು ಸಲಹೆ ಮತ್ತು ನಿರ್ವಹಣೆ, ತುರ್ತು ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆಗೆ ನೋಂದಾಯಿಸುವ ಬಗ್ಗೆ ಸಹಾಯ, ಸಂಧ್ಯಾ ಸುರಕ್ಷಾ ವೃದ್ಧಾಪ್ಯ ವೇತನದ ಬಗ್ಗೆ ಮಾರ್ಗದರ್ಶನಕ್ಕಾಗಿ ಹಿರಿಯ ನಾಗರಿಕರ ಸಹಾಯವಾಣಿ ದಾವಣಗೆರೆ ಡಿಆರ್ ಠಾಣೆ ಆವರಣದಲ್ಲಿ ಸ್ಥಾಪಿಸಲಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಮೊ- 89717- 24278, 94813- 64480ಗೆ ಸಂಪರ್ಕಿಸಲು ಯೋಜನಾ ಸಂಯೋಜಕರು ಕೋರಿದ್ದಾರೆ.
ಹುತಾತ್ಮ ದಿನಾಚರಣೆ
ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಹುತಾತ್ಮ ದಿನಾಚರಣೆ ಅಂಗವಾಗಿ ಮಾಲಾರ್ಪಣೆ ಮಾಡಲಾಯಿತು. ಕೆಪಿಸಿಸಿ ಸದಸ್ಯ ಡಿ. ಬಸವರಾಜ, ಹುತಾತ್ಮ ದಿನಾಚರಣೆ ಕುರಿತಂತೆ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ, ಪಾಲಿಕೆ ಪ್ರತಿಪಕ್ಷ ನಾಯಕ ಜಗದೀಶ, ಸದಸ್ಯರಾದ ಶಿವಕುಮಾರ, ಗಿರೀಶ ಕಾರ್ನಾಡ್, ಅಜ್ಜಂಪುರ ಶೆಟ್ರು ಮೃತ್ಯುಂಜಯ, ನಗರಸಭೆ ಮಾಜಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ, ಎ. ನಾಗರಾಜ, ವಿಶ್ವನಾಥ, ಪ್ರಕಾಶ, ಶಿವಮೂರ್ತಿಸ್ವಾಮಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com