ಹೊನ್ನಾಳಿ: ಪ್ರಾಣಿಗಳು ತಮ್ಮ ಜನ್ಮಸಹಜ ಗುಣಗಳನ್ನು ಇಂದಿಗೂ ಪ್ರದರ್ಶಿಸಿ ನಡೆಯುತ್ತಿವೆ. ಆದರೆ ಮನುಷ್ಯ ಮಾತ್ರ ತನ್ನ ಎಲ್ಲಾ ಮೌಲ್ಯಗಳನ್ನು ಮರೆತು ಅವಗುಣಗಳತ್ತ ಸಾಗುತ್ತಿದ್ದಾನೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಸ್ಥಳೀಯ ಹಿರೇಕಲ್ಮಠದಲ್ಲಿ ಅಯೋಜಿಸಲಾಗಿದ್ದ ಧರ್ಮಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಇಂದು ಕೂಡಿ ಬಾಳುವುದನ್ನು, ಪ್ರಮಾಣಿಕವಾಗಿ ದುಡಿಯುವುದನ್ನು ಮರೆಯುತ್ತಾ ಹೋಗುತ್ತಿದ್ದು ಪರಸ್ಪರ ಅಪನಂಬಿಕೆ, ಮೋಸ ವಂಚನೆ ಗಳು ಹಾಗೂ ಹಣಸಂಪಾದನೆಗೆ ಸುಲಭ ಹಾಗೂ ದುರುಳ ಮಾರ್ಗಗಳನ್ನು ಅನುಸರಿಸುತ್ತಿರುವುದರಿಂದ ಸಮಾಜದಲ್ಲಿ ನೈತಿಕತೆಯ ಅಧಃಪತನವಾಗುತ್ತಿದೆ ಎಂದು ಹೇಳಿದರು.
ಕಾಮಿನಾಳು ಹಿರೇಮಠದ ಸಿದ್ದಪಾದಶಿವಾಚಾರ್ಯ ಸ್ವಾಮೀಜಿ ಧರ್ಮೋಪದೇಶ ಮಾಡಿದರು. ಶಿವಮೊಗ್ಗ ನಗರ ಬಾಣಾಪುರದ ಮರುಳಪ್ಪನವರು ಪ್ರಸಾದ ಸೇವೆ ಮಾಡಿದರು. ನಿಜಗುಣ ಶಿವಯೋಗಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಂಭಣ್ಣ, ಮಂಜುನಾಥ್, ಅನಿಲ್, ಶೇಖರಪ್ಪ ಮಲ್ಲೇಶಪ್ಪ ಉಪಸ್ಥಿತರಿದ್ದರು. ಜನ್ನೇಶ್ವರ ಗಾನಕಲಾ ಸಂಘದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.