ಇಂದು ವಿದ್ಯಾರ್ಥಿ ಸಂಘ ಉದ್ಘಾಟನೆ

Updated on: 

ದಾವಣಗೆರೆ: ದಾವಣಗೆರೆ ಬಿಇಎ ಬಿಇಡಿ ಕಾಲೇಜಿನ 2012- 13ನೇ ಸಾಲಿನ ಬಿ.ಇಡಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಫೆ.13ರಂದು ಕಾಲೇಜಿನಲ್ಲಿ ನಡೆಯಲಿದೆ. ಅಂದು ಮಧ್ಯಾಹ್ನ 3ಕ್ಕೆ ಆಡಳಿತಾಧಿಕಾರಿ ಪ್ರೊ. ಜಿ.ಎಂ. ಮೌನೇಶ್ವರಪ್ಪ ಅಧ್ಯಕ್ಷತೆಯಲ್ಲಿ ಡಯಟ್ ಪ್ರಾಚಾರ್ಯ ಎಚ್.ಎಂ. ಪ್ರೇಮ ಸಂಘ ಉದ್ಘಾಟಿಸುವರು. ತಹಸೀಲ್ದಾರ ಮಂಜುನಾಥ ಆರ್. ಬಳ್ಳಾರಿ, ಕಾಲೇಜು ಪ್ರಾಚಾರ್ಯೆ ಎಸ್.ಎನ್. ಸುನಂದ, ಸಂಘದ ಸಂಪತಕುಮಾರ, ಸುಮಂಗಳ, ಲಿಂಗರಾಜ, ಬಿ.ಎಂ. ಮಂಗಳ, ಕೆ.ಎಚ್. ಪವಿತ್ರ, ಸಂಗೀತ, ಆಯಿಷಾ ಪಾಲ್ಗೊಳ್ಳುವರು.
ಬೆಂಗಳೂರಲ್ಲಿ ಧಾರ್ಮಿಕ ಭಿಕ್ಷಾಟನೆ
ಸರ್ಕಾರಕ್ಕೆ ಅರಿವು ಮೂಡಿಸಲು ಅಖಿಲ ಕರ್ನಾಟಕ ಡಾ. ಅಂಬೇಡ್ಕರ್ ಬೇಡ ಜಂಗಮ್ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಫೆ.15ರಂದು ಮಧ್ಯಾಹ್ನ 1ರಿಂದ 4ರವರೆಗೆ ಬೆಂಗಳೂರಿನ ಮೆಜೆಸ್ಟಿಕ ರೈಲ್ವೆ ನಿಲ್ದಾಣದಿಂದ ಮೌರ್ಯ ಜಂಕ್ಷನ್, ಫ್ರೀಡಂ ಪಾರ್ಕ್‌ವರೆಗೆ ಜೋಳಿಗೆ ಬೆತ್ತದೊಂದಿಗೆ ಧಾರ್ಮಿಕ ಭಿಕ್ಷಾಟನೆ ನಡೆಸಲಿದೆ. ಆಸಕ್ತ ಬೇಡ ಜಂಗಮರು ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆ.ಎಂ. ನಿಜಗುಣಸ್ವಾಮಿ(ಮೊ-74064- 78498), ಎಂ. ಸಿದ್ದಲಿಂಗಸ್ವಾಮಿ(87625- 87749), ಬಸವರಾಜ(99023- 80706)ಗೆ ಸಂಪರ್ಕಿಸುವಂತೆ ಎಂ. ಸಿದ್ದಲಿಂಗಸ್ವಾಮಿ ಕೋರಿದ್ದಾರೆ.
ನಾಳೆ ಪಾಲಿಕೆ ಆಡಳಿತ ವಿರುದ್ಧ ಪ್ರತಿಭಟನೆ
ದಾವಣಗೆರೆ: ಹದಗೆಟ್ಟ ರಸ್ತೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ದಾವಣಗೆರೆ ಪಾಲಿಕೆ ಬಿಜೆಪಿ ಆಡಳಿತ ವೈಫಲ್ಯ  ಖಂಡಿಸಿ ಫೆ.14ರಂದು ಕೆಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ ತಿಳಿಸಿದರು.  ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ  ಆಡಳಿತ ವೈಫಲ್ಯ ಎದುರಿಸುತ್ತಿದೆ. ಜನಹಿತ ಕಡೆಗಣಿಸಿದ್ದನ್ನು ಖಂಡಿಸಿ ಅಂದು ಬೆಳಿಗ್ಗೆ 11ಕ್ಕೆ ಬೀರಲಿಂಗೇಶ್ವರ ದೇವಸ್ಥಾನದಿಂದ ಪ್ರತಿಭಟನೆ ಆರಂಭಿಸಲಾಗುವುದು ಎಂದರು. ಮುಖಂಡರಾದ ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಕಕ್ಕರಗೊಳ್ಳ ಕೆ.ಆರ್. ಕಲ್ಲಿಂಗಪ್ಪ, ಕೆ. ಹೇಮಂತಕುಮಾರ, ಪರಶುರಾಮನಾಯ್ಕ, ರೇಣುಕಾಸ್ವಾಮಿ, ನಿಟುವಳ್ಳಿ ಬಸವರಾಜ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಸೈಯದ್ ಶಾಹೀನ್ ಮತ್ತಿತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com