ಹರಿಹರ: ಬೆಸ್ಕಾಂನಿಂದ ಆರ್ಏಪಿಡಿಆರ್ಪಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ 14ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ನಗರದ ವಿವಿಧ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ನಗರದ ಗಾಂಧಿ ನಗರ, ಕುಡಿಯುವ ನೀರಿನ ಘಟಕ, ಹಳೇ ಬರಂಪುರ, ನಾಡ ಬಂದ್ ಷಾವಲಿ ಮಾನ್ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯ ನಿರ್ವಾಹಕರ ಎಂಜಿನಿಯರ್ ಬಿ. ರುದ್ರಪ್ಪ ತಿಳಿಸಿದ್ದಾರೆ.
ಇಂದು ಗ್ರಾಹಕರ ಸಂವಾದ ಸಭೆ
ಹರಿಹರ: ನಗರದ ಬೆಸ್ಕಾಂ ಕಚೇರಿಯಲ್ಲಿ 14ರಂದು 3 ಗಂಟೆಗೆ ಗ್ರಾಹಕರ ಸಂವಾದ ಸಭೆ ನಡೆಯಲಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಭೆ ಯಶಸ್ವಿಗೊಳಿಸಬೇಕು ಎಂದು ಕಾರ್ಯ ನಿರ್ವಾಹಕ ಎಂಜಿನಿಯರ್ ಬಿ. ರುದ್ರಪ್ಪ ತಿಳಿಸಿದ್ದಾರೆ.
16, ಪಿಎಸ್ಎ ಪರೀಕ್ಷೆ
ಚನ್ನಗಿರಿ: ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ದಾವಣಗೆರೆ ಜಿಲ್ಲಾ ಜವಹಾರ ನವೋದಯ ವಿದ್ಯಾಲಯದ 9ಮತ್ತು11ನೇ ತರಗತಿಯ ವಿದ್ಯಾರ್ಥಿಗಳಿಗೆ ಸಿಬಿಎಸ್ಇಯ ಪ್ರಾಬ್ಲಂ ಸಾಲ್ವಿಂಗ್ ಅಸೆಸ್ಮೆಂಟ್ (ಪಿಎಸ್ಎ) ಪರೀಕ್ಷೆಯನ್ನು ಫೆಬ್ರವರಿ 16ರಂದು ಬೆಳಗ್ಗೆ 10ರಿಂದ 12ರವರೆಗೆ ನಡೆಸಲಾಗುವುದು. ಸಂಬಂಧಪಟ್ಟ ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.