ಬಿಎಸ್ಸೆನ್ನೆಲ್ ನೌಕರರ ಸಂಘಟನೆಗಳ ಧರಣಿ

Updated on: 

ದಾವಣಗೆರೆ: ಬಿಎಸ್ಸೆನ್ನೆಲ್ ನೌಕರರಿಗೆ ಶೇ.78.2 ಡಿಎ ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಶುಕ್ರವಾರ ಯುನೈಟೆಡ್ ಫೋರಂ ಆಫ್ ಬಿಎಸ್ಸೆನ್ನೆಲ್ ಯೂನಿಯನ್ ನೇತೃತ್ವದಲ್ಲಿ ನಿಗಮದ ನೌಕರರು ನಗರದಲ್ಲಿ ಧರಣಿ ನಡೆಸಿದರು.
ನಗರದ ರಿಂಗ್ ರಸ್ತೆಯ ಬಿಎಸ್ಸೆನ್ನೆಲ್ ಪ್ರಧಾನ ವ್ಯವಸ್ಥಾಪಕರ ಕಚೇರಿ ಮುಂಭಾಗದಲ್ಲಿ ದಿ ಫೋರಂ ಆಫ್ ಅಸೋಸಿಯೇಷನ್, ಯೂನಿಯನ್ ಆಫ್ ಬಿಎಸ್ಸೆನ್ನೆಲ್ ನಾನ್ ಎಕ್ಸಿಕ್ಯೂಟಿವ್ ಹಾಗೂ ಎಕ್ಸಿಕ್ಯೂಟಿವ್ ಸಂಘಟನೆ ನೇತೃತ್ವದಲ್ಲಿ ಮುಖಂಡರು, ನೌಕರರು ಧರಣಿ ನಡೆಸಿ, ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಒಪ್ಪಂದವಾಗಿದೆ: ಫೋರಂ ಅಧ್ಯಕ್ಷ ಟಿ. ಷಣ್ಮುಖಪ್ಪ ಮಾತನಾಡಿ, ದೆಹಲಿಯ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ನಡೆದ ಮಾತುಕತೆಯಲ್ಲಿ ಬಿಎಸ್ಸೆನ್ನೆಲ್ ಆಡಳಿತ ಮಂಡಳಿ, ನೌಕರರ ಸಂಘಟನೆಗಳ ಮಧ್ಯೆ ಒಪ್ಪಂದವಾಗಿದೆ. ಅದರಂತೆ ಶೇ.78.2 ಡಿಎ ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ಜಾರಿಗೊಳಿಸುವ ಬಗ್ಗೆ ನಿರ್ಧರಿಸಲಾಗಿತ್ತು ಎಂದರು.
ಮಾತುಕತೆಯ ಪ್ರಕಾರ ಕೇಂದ್ರ ಟೆಲಿಕಾಂ ಇಲಾಖೆ ಕಾರ್ಯದರ್ಶಿಗಳಿಗೆ ಒಪ್ಪಂದ ಬಗ್ಗೆ ವಿವರ ಕಳಿಸಿ, ಅದನ್ನು ಜಾರಿಗೊಳಿಸಲು ಒತ್ತಾಯಿಸಲಾಗಿತ್ತು. ಆದರೆ, ಕೇಂದ್ರವು ಅದಕ್ಕೆ ಸೊಪ್ಪು ಹಾಕದೆ ಉದಾಸೀನವನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಕರೆಯ ಮೇರೆಗೆ ಇಂದು ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ಬೇಡಿಕೆಗೆ ಸ್ಪಂದಿಸದಿದ್ದರೆ, ತೀವ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.
ಸಂಘಟನೆಯ ಚನ್ನಪ್ಪ, ತಿಪ್ಪಸ್ವಾಮಿ, ಮೋಹನ ಕುಮಾರ, ಪರಮೇಶ್ವರಪ್ಪ, ಮಲ್ಲಿಕಾರ್ಜುನ, ಪ್ರಕಾಶ, ಜಯಪ್ಪ, ನಿಜಲಿಂಗಪ್ಪ, ಲಕ್ಷ್ಮಿಕಾಂತ, ಸುರೇಶ, ರಾಮಪ್ಪ, ರಮೇಶ, ಗೋಪಾಲ, ಜಯಪ್ರಕಾಶ, ಮಂಜುನಾಥ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com